ಮಲಪ್ಪುರಂ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಆರ್ಯಾಡನ್ ಮುಹಮ್ಮದ್ (87) ನಿಧನರಾಗಿದ್ದಾರೆ. ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದರು, ವಯೋಸಹಜ ಖಾಯಿಲೆಯಿಂದ ಕೆಲಕಾಲ ರಾಜಕೀಯ ಜೀವನದಿಂದ ದೂರವಿದ್ದರು.
ಆರ್ಯಾಡನ್ ಮುಹಮ್ಮದ್ ಅವರ ಮರಣದೊಂದಿಗೆ, ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನವು ಕೊನೆಗೊಂಡಿತು.
ಅವರು ಮೂರು ಸಚಿವ ಸಂಪುಟಗಳ ಸದಸ್ಯರಾಗಿದ್ದರು. ನಿಲಂಬೂರಿನಿಂದ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ನಾಯನಾರ್ ಸಂಪುಟದಲ್ಲಿ ಕಾರ್ಮಿಕ ಮತ್ತು ಅರಣ್ಯ ಸಚಿವರಾಗಿ, ಎಕೆ ಆಂಟನಿ ಸಂಪುಟದಲ್ಲಿ ಕಾರ್ಮಿಕ ಮತ್ತು ಪ್ರವಾಸೋದ್ಯಮ ಸಚಿವರಾಗಿ ಮತ್ತು ಉಮ್ಮನ್ ಚಾಂಡಿ ಸಂಪುಟದಲ್ಲಿ ವಿದ್ಯುತ್ ಸಚಿವರಾಗಿ ಕೆಲಸ ಮಾಡಿದ್ದರು. ಅವರು ಪುತ್ರ ಚಿತ್ರ ನಿರ್ದೇಶಕ ಮತ್ತು ಕಾಂಗ್ರೆಸ್ ನಾಯಕ ಆರ್ಯಾಡನ್ ಶೌಕತ್ ಸಹಿತ ಅನೇಕ ಬಂಧುಗಳನ್ನು ಅಗಲಿದ್ದಾರೆ.




