ಕುಂಬಳೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ತಳೆದ ವಿರೋಧ ನೀತಿ ಬಗ್ಗೆ ಪ್ರಶ್ನಿಸಿ ಕಾಸರಗೋಡಿನ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ದೇಶದ ಅತ್ಯಂತ ಪ್ರಮುಖವಾದ ಬಡತನ ನಿವಾರಣಾ, ಉಪಜೀವನ ಪ್ರೋತ್ಸಾಹ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ಎನ್.ಆರ್.ಇ.ಜಿ)ಯು ಇತರ ರಾಜ್ಯಗಳೊಂದಿಗೆ ಕೇರಳದಲ್ಲಿಯೂ ಕಾರ್ಯಗತಗೊಳಿಸಲಾಗಿದ್ದು ಕಳೆದ ಹದಿನೈದು ವರ್ಷಗಳಲ್ಲಿ ಪಂಚಾಯತಿಗಳಲ್ಲಿ ಬಡವರ ಸಾಮಾಜಿಕವಾಗಿ ಹಿಂದುಳಿದಿರುವವರ ಜೀವನದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಇದರ ಫಲಾನುಭವಿಗಳಾಗಿದ್ದಾರೆ. ಆದರೆ ಕೇಂದ್ರ ಸರ್ಕಾರವು ಎಫ್.ಎನ್.ಒ.ಜೆ- 11017/31/217/ಆರ್.ಇ-7(ಇ-378816) , 2022 ಜುಲೈ 18 ರಂದು ಬಿಡುಗಡೆಗೊಳಿಸಿದ ಆದೇಶದ ಪ್ರಕಾರ ಹೊಸ ನೀತಿ ಬದಲಾವಣೆ ಸೂಚನೆಗಳ ಕಾರಣ, ಎನ್ ಆರ್ ಇ ಜಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬಹುದಾಗಿದೆ.
ಇದು ಗ್ರಾಮೀಣ ಪ್ರದೇಶದ ಬಡ ಜನತೆಯೆಡೆಯಲ್ಲಿ ಅತ್ಯಂತ ಮಾರ್ಮಿಕ ಪರಿಣಾಮ ಬೀರುತ್ತಿದೆ ಎಂಬ ಕಾರಣದಿಂದ ಕಾಸರಗೋಡು ಮಂಡಲದ ವಿವಿಧ ಗ್ರಾಮಪಂಚಾಯತಿಗಳು ಪ್ರಸ್ತುತ ನೀತಿಯ ವಿರುದ್ಧ ಏಕಕಂಠದಿಂದ ಪ್ರಸ್ತಾವನೆಯನ್ನು ಮಂಡಿಸಿ ಸಂಸದರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಸ್ವೀಕರಿಸುವಂತೆ ಒತ್ತಾಯಿಸಿ, ಕೇಂದ್ರ ಪಂಚಾಯತ್ ರಾಜ್ ಗ್ರಾಮ ಅಭಿವೃದ್ಧಿ ಇಲಾಖೆಗೆ ಹಾಗೂ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಸಂಸದರು ಕಳುಹಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮೀಣ ಉದ್ಯೋಗಖಾತರಿ ಯೋಜನೆ ಬಗ್ಗೆ ಸರ್ಕಾರಕ್ಕೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಪತ್ರ
0
ಸೆಪ್ಟೆಂಬರ್ 24, 2022




.jpg)
