ಪೆರ್ಲ : ಎಣ್ಮಕಜೆ ಗ್ರಾ.ಪಂ.ನ 9ನೇ ವಾರ್ಡಿನ ಕುಟುಂಬಶ್ರೀ ಎಡಿಎಸ್ ಸಮಿತಿ ವತಿಯಿಂದ ಮಹೀಂದ್ರಾ ಫಿನಾನ್ಸ್ ನ ಪ್ರಾಯೋಜಕತ್ವದಲ್ಲಿ ಫಲವಸ್ತು ಗಿಡ ವಿತರಣೆ ಜರಗಿತು.
ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಮಹೀಂದ್ರಾ ಫಿನಾನ್ಸ್ ನ ವಲಯ ಅಧ್ಯಕ್ಷ ಕೃಷ್ಣ ಪ್ರಸಾದ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ, ಪಂ. ಕ್ಷೇಮ ಕಾರ್ಯಸ್ಥಾಯಿ ಸಮಿತಿ ಆಧ್ಯಕ್ಷೆ ಸೌದಾಭಿ ಹನೀಫ್, ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್, ಸಹಾಯಕ ಕಾರ್ಯದರ್ಶಿ ಬಿನೀಶ್,ಸಿಡಿಎಸ್ ಆಧ್ಯಕ್ಷೆ ಜಲಜಾಕ್ಷಿ, ಉಪಾಧ್ಯಕ್ಷೆ ಶಶಿಕಲಾ ಸ್ವರ್ಗ, ಮಹೀಂದ್ರಾ ಫಿನಾನ್ಸ್ ನ ಪ್ರಬಂಧಕ ಪ್ರಶಾಂತ್ ಮೊದಲಾದವರು ಭಾಗವಹಿಸಿದ್ದರು. ಪಂ.ಮಾಜಿ ಉಪಾಧ್ಯಕ್ಷೆ ಆಯಿμÁ ಎ.ಎ.ಸ್ವಾಗತಿಸಿ, ಸಿಡಿಎಸ್ ಸದಸ್ಯೆ ಯಶ್ಮಿನ್ ವಂದಿಸಿದರು.
ಪೆರ್ಲದಲ್ಲಿ ಕುಟುಂಬಶ್ರೀ ಎಡಿಎಸ್ ಸದಸ್ಯರಿಗೆ ಫಲವಸ್ತು ಗಿಡ ವಿತರಣೆ
0
ಸೆಪ್ಟೆಂಬರ್ 24, 2022
Tags




.jpg)
