ಪೆರ್ಲ: ನಿರಕ್ಷರರಾಗಿರುವ ನಾಗರಿಕರಿಗಾಗಿ ಎಣ್ಮಕಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಆರಂಭಿಸಲಿರುವ ಕೇಂದ್ರ ವಿಸೃತ ಯೋಜನೆಯಾದ ನ್ಯೂ ಇಂಡಿಯ ಲಿಟ್ರೆಸಿ ಕಾರ್ಯ ಯೋಜನೆಯ ಯಶಸ್ವಿಯ ಸ್ವಾಗತ ಸಮಿತಿ ರೂಪೀಕರಣ ಸಭೆ ಜರಗಿತು.
ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್, ಪಂ.ಸದಸ್ಯರಾದ ಮಹೇಶ್ ಭಟ್, ಸಿಡಿಎಸ್ ಆಧ್ಯಕ್ಷೆ ಜಲಜಾಕ್ಷಿ, ಮಂಜೇಶ್ವರ ಬ್ಲಾಕ್ ಪ್ರೇರಕ್ ಪರಮೇಶ್ವರ ನಾಯ್ಕ್ ,ಪಂಚಾಯತಿ ಪ್ರೇರಕ್ ಆನಂದ ಕೆ.ಮೊದಲಾದವರು ಭಾಗವಹಿಸಿದ್ದರು. ಸಹಾಯಕ ಕಾರ್ಯದರ್ಶಿ ಬಿನೀಶ್ ಯೋಜನೆಯ ಬಗ್ಗೆ ವಿಷಯ ಪ್ರಸ್ತಾಪಿಸಿದರು. ನ್ಯೂ ಇಂಡಿಯ ಲಿಟ್ರೆಸಿ ಯೋಜನೆಯಡಿಯಲ್ಲಿ ಪಂಚಾಯತಿನ ನಿರಕ್ಷರರನ್ನು ಗುರುತಿಸಿ ಅವರಿಗೆ ಕನಿಷ್ಠ ಅವಧಿಯ ತರಗತಿ ನಡೆಸಿ ವಿದ್ಯಾವಂತರನ್ನಾಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಂತೆ ಈ ಯೋಜನೆಯ ಯಶಸ್ವಿಗಾಗಿ ಪಂಚಾಯತು ಸಮಿತಿ ರೂಪೀಕರಿಸಲಾಗಿದ್ದು ಮುಂದೆ ಪ್ರತಿ ವಾರ್ಡಿನಲ್ಲೂ ಜನಪ್ರತಿನಿಧಿ,ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಹರಿತಾ ಕರ್ಮ ಹಾಗೂ ಉದ್ಯೋಗ ಖಾತರಿಯ ಮೇಟ್, ಸ್ಥಳೀಯ ಸಾಮಾಜಿಕ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ವಾರ್ಡ್ ಸಮಿತಿ ರಚಿಸಿ ಯೋಜನೆಯನ್ನು ಯಶಸ್ವಿಗೊಳಿಸಲಾಗುತ್ತಿದೆ.
ಎಣ್ಮಕಜೆ ಗ್ರಾ.ಪಂ.ನಲ್ಲಿ ನ್ಯೂ ಇಂಡಿಯ ಲಿಟ್ರೆಸಿ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ ರೂಪೀಕರಣ
0
ಸೆಪ್ಟೆಂಬರ್ 24, 2022
Tags




.jpg)
