ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಷರ್ಂಪ್ರತಿಯಂತೆ ಆಶ್ವಯುಜ ಶುದ್ಧ ಪಾಡ್ಯದಿಂದ ನವಮಿ ತನಕ ಸೆ.26ರಿಂದ ಅಕ್ಟೋಬರ್ 4ರ ತನಕ ಶರನ್ನವರಾತ್ರಿ ಉತ್ಸವವು ಶ್ರೀದೇವಿಯ ವಿಶೇಷ ಆರಾಧನೆ ಮತ್ತು ಸಂತರ್ಪಣೆಯೊಂದಿಗೆ ಜರಗಲಿರುವುದು.
ಈ ಸಂದರ್ಭದಲ್ಲಿ ನವರಾತ್ರಿಯ ಪಾಡ್ಯದಿಂದ ನವಮಿ ವರೆಗೆ ತುಲಾಭಾರ ಸೇವೆಯು ನಡೆಯಲಿರುವುದು. ಸೆ.27ರಂದು ಮಂಗಳವಾರ ಬಿದಿಗೆಯಂದು ಬೆಳಗಿನ ಪೂಜೆಯ ಬಳಿಕ `ಕದಿರೋತ್ಸವ' ದೇವಳ ತುಂಬಿಸುವ ಕಾರ್ಯಕ್ರಮವಿರುವುದು. ಅಕ್ಟೋಬರ್ 4 ನವಮಿಯಂದು ಶ್ರೀದೇವಿಗೆ ನವಾನ್ನ, ಪಾಯಸ ಸಮರ್ಪಣೆ, ಬೆಳಗ್ಗೆ 8ರಿಂದ 12.30ರ ತನಕ ಆಯುಧಪೂಜೆ, ಅಕ್ಟೋಬರ್ 5 ವಿಜಯದಶಮಿಯಂದು ಬೆ.8 ರಿಂದ 10.30ರ ತನಕ ವಿದ್ಯಾರಂಭ ನಡೆಯಲಿರುವುದು. ನವರಾತ್ರಿಯಂದು ಪ್ರತೀದಿನ ಭಜನೆ, ಬೆಳಗ್ಗೆ 11 ಗಂಟೆಯಿಂದ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿರುವುದು.
ಸಾಂಸ್ಕøತಿಕ ಕಾರ್ಯಕ್ರಮಗಳು :
ಸೆ.30ರಂದು ಸಂಜೆ 6 ರಿಂದ 9 ರ ವರೆಗೆ ರಂಗಸಿರಿ ದಸರಾ ಯಕ್ಷಪಯಣದ ಅಂಗವಾಗಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ನವಾಗತ ವಿದ್ಯಾರ್ಥಿಗಳಿಂದ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ನಿರ್ದೇಶನದಲ್ಲಿ ಯಕ್ಷಗಾನ ರಂಗಪ್ರವೇಶ, ಅಕ್ಟೋಬರ್ 1ರಂದು ಬೆಳಗ್ಗೆ 10 ರಿಂದ 12.30ರ ತನಕ ಬೇಂದ್ರೋಡು ಗೋವಿಂದ ಭಟ್ಟ ಮತ್ತು ತಂಡದವರಿಂದ ಯಕ್ಷ-ಗಾನ-ವೈಭವ, ಅ.2ರಂದು ಬೆಳಗ್ಗೆ 10 ರಿಂದ ಗೀತಾಜ್ಞಾನ ಯಜ್ಞದ ಪೆರ್ಲ ಮತ್ತು ಅಗಲ್ಪಾಡಿ ಘಟಕದ ಸದಸ್ಯರಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಉಪ್ಪಂಗಳ ಸಹೋದರಿಯರಿಂದ ಹರಿನಾಮ ಸಂಕೀರ್ತನೆ ನಡೆಯಲಿರುವುದು.
ಸೆ.26ರಿಂದ ಅಗಲ್ಪಾಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
0
ಸೆಪ್ಟೆಂಬರ್ 24, 2022
Tags





