ಕಾಸರಗೋಡು: ಅನುಮತಿ ರಹಿತ ಮೆರವಣಿಗೆ ಹಾಗೂ ಹರತಾಳಕ್ಕೆ ಸಂಬಂಧಿಸಿ ಪಿಎಫ್‍ಐ ಕಾರ್ಯಕರ್ತರ ವಿರುದ್ಧ ಜಿಲ್ಲೆಯ ವಿವಿಧ ಠಾನೆಗಳಲ್ಲಿ ಕೇಸು ದಾಖಲಿಸಲಾಗಿದೆ. ಕಾಸರಗೋಡು ನಗರದ ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಅನಧಿಕೃತವಾಗಿ ಮೆರವಣಿಗೆ ನಡೆಸಿದ 60ಮಂದಿ ಪಿಎಫ್‍ಐ ಕಾರ್ಯಕರ್ತರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ಪೇಟೆಯಲ್ಲಿ ಮೆರವಣಿಗೆ ನಡೆಸಿ, ವಾಹನ ಸಂಚಾರಕ್ಕೆ ತಡೆಯೊಡ್ಡಿದ 40ಮಂದಿ ವಇರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಇವರಲ್ಲಿ 18ಮಂದಿಯನ್ನು ಬಂಧೀಸಲಾಗಿದೆ. ಕುಂಬಳೆ ಪೇಟೆಯಲ್ಲಿ ಅನುಮತಿಯಿಲ್ಲದೆ ಮೆರವಣಿಗೆ ನಡೆಸಿದ ಒಂಬತ್ತು ಮಂದಿ ಪಿಎಫ್‍ಐ ಕಾರ್ಯಕರ್ತರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಲಾರಿಗೆ ಕಲ್ಲೆಸೆತ-ಕೇಸು:
ಕುಂಬಳೆ ಪೇಟೆಯಲ್ಲಿ ಸರಕು ಸಾಗಾಟದ ಲಾರಿಗೆ ಕಲ್ಲೆಸೆದ ಪ್ರಮರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್‍ಪುತ್ತೂರು ಕೊಪ್ಪಳಬಜಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿನಲ್ಲಿ ಆಘಮಿಸಿದ ಇಬ್ಬರು ಕಲ್ಲೆಸೆದು ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಮೂಲಕ ಇವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾರಿ ಚಾಲಕ, ಎರ್ನಾಕುಳಂ ನಿವಾಸಿ ನಾಸರ್ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಕಾಸರಗೋಡಿನಲ್ಲಿ ಹರತಾಳದ ಮಧ್ಯೆ ಪಿಎಫ್‍ಐ ದಾಂಧಲೆ: ಹಲವರಿಗೆ ಕೇಸು
0
ಸೆಪ್ಟೆಂಬರ್ 24, 2022
Tags




