ಕಾಸರಗೋಡು: ಕೂಡ್ಲು ಮಾರಿಗುಡಿ ಎಂದೇ ಪ್ರಸಿದ್ಧವಾಗಿರುವ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಳಭೈರವ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ.26 ರಿಂದ ಅ.5 ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸೆ.26 ರಂದು ಬೆಳಗ್ಗೆ ಗಣಪತಿ ಹೋಮ, ಕಲಶ ಪೂಜೆ, ತರವಾಡು ಮನೆಯಿಂದ ಭಂಡಾರ ಆಗಮನದೊಂದಿಗೆ ನವರಾತ್ರಿ ಪ್ರಾರಂಭ, 27 ರಂದು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಡೆಯುವುದು.
ಸೆ.29 ರಂದು ಚಂಡಿಕಾ ಸೇವೆ, 30 ರಂದು ಚಂಡಿಕಾ ಹೋಮ, ರಾತ್ರಿ ಅಗ್ನಿ ಸೇವೆ. ಅ.1 ರಂದು ಬಟ್ಟಲು ಮೆರವಣಿಗೆ, ಸಂಜೆ ಬಟ್ಟಲು ಏರಿಸುವ ಪೂಜೆ, ಪ್ರಾತ:ಕಾಲ ಮಂಗಳ ಸ್ನಾನ, 3 ರಂದು ಯಕ್ಷಗಾನ ತಾಳಮದ್ದಳೆ, 4 ರಂದು ಮಹಾಂಕಾಳಿ ಸೇವೆ, 5 ರಂದು ವೆಂಕಟ್ರಮಣ ಸ್ವಾಮಿ ಮುಡಿಪು ಪೂಜೆ, ಭಂಡಾರ ನಿರ್ಗಮನ, ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು.
ಕೂಡ್ಲು ಮಾರಿಗುಡಿಯಲ್ಲಿ ನವರಾತ್ರಿ ಮಹೋತ್ಸವ
0
ಸೆಪ್ಟೆಂಬರ್ 24, 2022




