ಕಾಸರಗೋಡು: ಮೀನುಗಾರಿಕಾ ಇಲಾಖೆಯ ಅಧೀನದಲ್ಲಿರುವ ಸೊಸೈಟಿ ಫಾರ್ ಅಸಿಸ್ಟೆನ್ಸ್ ಟು ಫಿಶರ್ ವುಮೆನ್ (ಎಸ್‍ಎಎಫ್) ಕರಾವಳಿ ಮೈತ್ರಿ ಯೋಜನೆಯನ್ವಯ ಕಿರು ಉದ್ಯಮ ಘಟಕಗಳನ್ನು ಪ್ರಾರಂಭಿಸಲು ಆರ್ಥಿಕ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮೀನುಗಾರಿಕಾ ಕುಟುಂಬದ ಮಹಿಳೆಯರು ಒಳಗೊಂಡಿರುವ ಗುಂಪುಗಳು ಅರ್ಜಿ ಸಲ್ಲಿಸಬಹುದಾಗಿದ್ದು, 20 ರಿಂದ 50 ರ ಮದ್ಯೆ ಪ್ರಾಯ ಮಿತಿ ಇರುವ ಎರಡರಿಂದ ಐದು ಸದಸ್ಯರನ್ನೊಳಗೊಂಡ ಗುಂಪುಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪ್ರಾಕೃತಿಕ ವಿಕೋಪಗಳಿಗೆ ಒಳಗಾದವರು, ಮಾರಕ ರೋಗ ಪೀಡಿತರಿರುವ ಕುಟುಂಬದ ಸದಸ್ಯರು, ಟ್ರಾನ್ಸ್ ಜೆಂಡರ್, ವಿಧವೆಯರು ಮತ್ತು ಕರಾವಳಿ ಸ್ಕಿಲ್ ಕೋರ್ಸ್‍ಗೆ ಹಾಜರಾದವರಿಗೆ ಆದ್ಯತೆ ನೀಡಲಾಗುವುದು. ಸಾಫ್ ನಿಂದ ಒಂದು ಬಾರಿ ಹಣಕಾಸಿನ ನೆರವು ಪಡೆದವರು ಅರ್ಜಿ ಸಲ್ಲಿಸಬೇಕಾಗಿಲ್ಲ. ಯೋಜನಾ ಮೊತ್ತದ ಶೇ.75 ಅನುದಾನ, ಶೇ.20 ಬ್ಯಾಂಕ್ ಸಾಲ ಮತ್ತು ಶೇ.5 ಫಲಾನುಭವಿ ಪಾಲು ಒಳಗೊಂಡಿರುತ್ತದೆ. ಒಬ್ಬ ಸದಸ್ಯೆಗೆ 1 ಲಕ್ಷ ರೂಪಾಯಿ ಯಂತೆ ಐದು ಸದಸ್ಯರಿರುವ ಒಂದು ಗುಂಪಿಗೆ 5 ಲಕ್ಷ ರೂಪಾಯಿ ತನಕ ಸಹಾಯಧನ(ಸಬ್ಸಿಡಿ) ನೀಡಲಾಗುವುದು. ಡ್ರೈಫಿಶ್ ಯುನಿಟ್, ಹೋಟೆಲ್ ಮತ್ತು ಕ್ಯಾಟರಿಂಗ್, ಫಿಶ್ ಬೂತ್, ಫೆÇ್ಲೀರ್ ಮಿಲ್, ಹೌಸ್‍ಕೀಪಿಂಗ್, ಫ್ಯಾಶನ್ ಡಿಸೈನಿಂಗ್, ಟೂರಿಸಂ, ಐಟಿ ಸಂಬಂಧಿತ ಸಂಸ್ಥೆಗಳು, ಫಿಶ್ ವೆಂಟಿಂಗ್ ಕಿಯೋಸ್ಕ್, ಪ್ರಾವಿಷನ್ ಸ್ಟೋರ್, ಟ್ಯೂಷನ್ ಸೆಂಟರ್, ಕಂಪ್ಯೂಟರ್ ಡಿಟಿಪಿ ಸೆಂಟರ್, ಗಾರ್ಡನ್ ಸೆಟ್ಟಿಂಗ್ ಮತ್ತು ನರ್ಸರಿ, ಲ್ಯಾಬ್ ಆಂಡ್ ಮೆಡಿಕಲ್ ಸ್ಟೋರ್, ಪೆಟ್ ಶಾಪ್, ಆಹಾರ ಸಂಸ್ಕರಣೆ ಇತ್ಯಾದಿಗಳಿಗೆ ಈ ಯೋಜನೆಯ ಮೂಲಕ ಆರ್ಥಿಕ ನೆರವು ಲಭ್ಯವಗಲಿದೆ. ಅರ್ಜಿಗಳನ್ನು ಮತ್ಸ್ಯ ಭವನಗಳು, ಎಸ್‍ಎಎಫ್‍ನ ನೋಡಲ್ ಕಛೇರಿ ಮತ್ತು ಮೀನುಗಾರಿಕಾ ಉಪನಿರ್ದೇಶಕರ ಕಛೇರಿಯಿಂದ ಪಡೆಯಬಹುದು. ಸೆಪ್ಟೆಂಬರ್ 30ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಉದ್ದಿಮೆ ಘಟಕ ಸ್ಥಾಪನೆಗೆ ಧನಸಹಾಯಕ್ಕಾಗಿ ಮಹಿಳಾ ಗುಂಪುಗಳಿಂದ ಅರ್ಜಿ ಆಹ್ವಾನ
0
ಸೆಪ್ಟೆಂಬರ್ 16, 2022




