ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೌಕರರು ವಿಶ್ವ ರೋಗಿಗಳ ದಿನಾಚರಣೆ ಶುಕ್ರವಾರ ನಡೆಯಿತು. ಸುರಕ್ಷತಾ ದಿನದ ಅಂಗವಾಗಿ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಡಾ.ದಿವಾಕರ ರೈ ಪ್ರಮಾಣ ವಚನ ಬೋಧಿಸಿದರು. ರೋಗಿಗಳ ಸುರಕ್ಷತಾ ದಿನವು ಆರೋಗ್ಯ ರಕ್ಷಣೆಯ ಸಮಯದಲ್ಲಿ ರೋಗಿಗಳಿಗೆ ಸಂಭವಿಸುವ ಅಪಾಯಗಳು, ದೋಷಗಳು ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ನೆರವಾಗುತ್ತದೆ. ರೋಗಿಗಳ ಆರೈಕೆಯಲ್ಲಿನ ದೋಷಗಳನ್ನು ಕಡಿಮೆ ಮಾಡುವ ಮಾರ್ಗಗಳನ್ನು ಗುರುತಿಸಲು ಮತ್ತು ಕಾರ್ಯಗತಗೊಳಿಸಲು ದಿನಾಚರಣೆ ಮಹತ್ವದ್ದಾಗಿದೆ. ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಸಿಬ್ಬಂದಿಗಳ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸಲಾಗುತ್ತದೆ. ರೋಗಿಗಳು ಮತ್ತು ಅವರ ಕುಟುಂಬದವರ ಆರೈಕೆಯನ್ನು ಸುಧಾರಿಸಲು ಸಿಬ್ಬಂದಿಗಳು ಈ ಮೂಲಕ ಪ್ರತಿಜ್ಞೆ ಪಡೆಯಲಾಗುತ್ತದೆ ಎಮದು ಡಾ.ದಿವಾಕರ ರೈ ತಿಳಿಸಿದರು.
ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಪಿ.ಎಚ್.ಎನ್.ಕುಂಞಮಿ, ನರ್ಸಿಂಗ್ ಅಧಿಕಾರಿಗಳಾದ ಜ್ಯೋತಿ ಬಾಲನ್, ವಿ.ಸಜಿತಾ, ಜೆಪಿಎಚ್‍ಎನ್ ಎಸ್.ಶಾರದ, ಪಿಆರ್‍ಒ ಎ.ಕೀರ್ತನಾ, ಜೆಎಚ್‍ಐಗಳಾದ ಕೆ.ಆದರ್ಶ, ತಿರುಮಲೇಶ್ವರ, ಒ.ಎ.ಪ್ರಜೀಶ, ಮಲಿಕ್ ದಿನಾರ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಜ್ಞೆಯಲ್ಲಿ ಪಾಲ್ಗೊಂಡರು.
ವಿಶ್ವ ರೋಗಿಗಳ ಸುರಕ್ಷತಾ ದಿನಾಚರಣೆ: ಪ್ರತಿಜ್ಞೆ ಸ್ವೀಕಾರ
0
ಸೆಪ್ಟೆಂಬರ್ 16, 2022




.jpg)
