ಕಣ್ಣೂರು: ಜಿಲ್ಲೆಯ ಪಿಎಫ್ ಐ ಕೇಂದ್ರಗಳ ಮೇಲೆ ಸತತ ಎರಡನೇ ದಿನವೂ ದಾಳಿ ನಡೆದಿದೆ. ಹರತಾಳದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗುತ್ತಿದೆ.
ಮಟ್ಟನ್ನೂರಿನಲ್ಲಿರುವ ಪಾಪ್ಯುಲರ್ ಫ್ರಂಟ್ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ನಿನ್ನೆ ಜಿಲ್ಲೆಯ ತಾಣಾ, ಮಟ್ಟನ್ನೂರು ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಲಾಗಿದ್ದು, ಕೂತುಪರಂಬ್ ಎಸಿಪಿ ಪ್ರದೀಪನ್ ಕಣ್ಣಿಪೆÇಯಿಲ್ ನೇತೃತ್ವದಲ್ಲಿ ಮಟ್ಟನ್ನೂರಿನಲ್ಲಿರುವ ಫಾತಿಮಾಸ್ ಎಂಬ ಪೀಠೋಪಕರಣ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ.
ಹರತಾಳದ ದಿನ ಕಣ್ಣೂರು ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರದ ಘಟನೆಗಳು ನಡೆದಿದ್ದವು. ಈ ಎಲ್ಲ ಹಿಂಸಾಕೃತ್ಯಗಳಿಗೆ ಒಂದೇ ಮಾದರಿಯಿದ್ದು, ಇದರ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ನ ಕೆಲವು ಕೇಂದ್ರಗಳಲ್ಲಿ ಈ ಸಂಚು ನಡೆದಿದ್ದು, ಹಿಂಸಾಚಾರಕ್ಕೆ ಈ ಸ್ಥಳಗಳಿಂದ ಹಣ ಸಿಕ್ಕಿದೆ ಎಂಬ ಮಾಹಿತಿ ಪೆÇಲೀಸರಿಗೆ ಸಿಕ್ಕಿತ್ತು.
ನಿನ್ನೆ ಕಣ್ಣೂರು ಎಸಿಪಿ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿತ್ತು. ಬಿ ಮಾರ್ಟ್ ಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ. ದಂಧೆಗೆ ಬೇಕಾಗುವ ಹಣದ ಮೂಲ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ದಾಳಿ ನಡೆಸಲಾಗಿದ್ದು, ತಪಾಸಣೆ ವೇಳೆ ಲ್ಯಾಪ್ ಟಾಪ್ ಹಾಗೂ ಫೆÇೀನ್ ವಶಪಡಿಸಿಕೊಳ್ಳಲಾಗಿದೆ.
ಕಣ್ಣೂರಿನಲ್ಲಿ ಪಾಪ್ಯುಲರ್ ಫ್ರಂಟ್ ಕೇಂದ್ರಗಳ ಮೇಲೆ ಮತ್ತೊಂದು ದಾಳಿ; ಹರತಾಳ ದಿನ ನಡೆದ ಹಿಂಸಾಚಾರದ ಸಂಚಿನ ಮೂಲ ಹುಡುಕಾಟದಲ್ಲಿ ಪೋಲೀಸರು
0
ಸೆಪ್ಟೆಂಬರ್ 26, 2022





