ತಿರುವನಂತಪುರ: ಪಾಪ್ಯುಲರ್ ಫ್ರಂಟ್ ನಾಯಕರ ಬಂಧನದ ತನಿಖೆಯನ್ನು ಎನ್ ಐಎ ಚುರುಕುಗೊಳಿಸಿದೆ. ಆರೋಪಿ ನಾಯಕರಿಂದ ವಶಪಡಿಸಿಕೊಂಡ ಡಿಜಿಟಲ್ ಸಾಕ್ಷ್ಯಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಡಿಜಿಟಲ್ ಸಾಕ್ಷ್ಯವನ್ನು ತಿರುವನಂತಪುರಂ ಸಿ-ಡಿಎಸಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಆರೋಪಿಗಳ ಮೊಬೈಲ್ ಫೆÇೀನ್, ಲ್ಯಾಪ್ ಟಾಪ್ ಮುಂತಾದ ಸಾಧನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವೈಜ್ಞಾನಿಕ ತನಿಖೆಯು ಫೆÇೀನ್ ಕರೆ ದಾಖಲೆಗಳು, ವಾಟ್ಸಾಪ್ ಚಾಟ್‍ಗಳು ಇತ್ಯಾದಿಗಳನ್ನು ಮರುಪಡೆಯುವ ಗುರಿಯನ್ನು ಹೊಂದಿದೆ ಎಂದು ಎಐಎ ಮಾಹಿತಿ ನೀಡಿದೆ.
ಬಂಧಿತ ಮುಖಂಡರನ್ನು ಸತತ ಮೂರನೇ ದಿನವೂ ವಿಚಾರಣೆ ನಡೆಸಲಾಗುತ್ತಿದೆ. ವಿದೇಶಿ ಧನಸಹಾಯ ಮತ್ತು ಭಯೋತ್ಪಾದಕರ ನೇಮಕಾತಿಯಂತಹ ವಿಷಯಗಳ ಮೇಲೆ ಪ್ರಶ್ನಿಸಲಾಗುತ್ತಿದೆ. ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಎನ್‍ಐಎ ಸ್ಪಷ್ಟಪಡಿಸಿದೆ.
ಹರತಾಳ ದಿನದಂದು ಕೊಲ್ಲಂ ಪೆÇಲೀಸರ ಮೇಲೆ ಹಲ್ಲೆ ನಡೆಸಿದ ಪಿಎಫ್‍ಐ ಕಾರ್ಯಕರ್ತ ಶೆಮ್ನಾದ್ ನನ್ನು ಬಂಧಿಸಲಾಗಿದೆÀ. ಬೈಕ್ ಡಿಕ್ಕಿ ಹೊಡೆದು ಪೆÇಲೀಸ್ ಅಧಿಕಾರಿಗಳಿಗೆ ಅಪಾಯ ತರಲು ಯತ್ನಿಸಿದ್ದ. ಕಣ್ಣೂರಿನ ಮಟ್ಟನ್ನೂರಿನಲ್ಲಿ ಪಿಎಫ್ ಐ ಕಾರ್ಯಕರ್ತರು ಮತ್ತು ಮುಖಂಡರ ಕಚೇರಿಗಳ ಮೇಲೆ ದಾಳಿ. ಹರತಾಳ ದಿನದಂದು ನಡೆದ ಹಿಂಸಾಚಾರ ಘಟನೆಗಳ ಸಂಚು, ಮುಖಂಡರ ಆರ್ಥಿಕ ಮೂಲಗಳನ್ನು ಪತ್ತೆ ಹಚ್ಚುವ ಗುರಿಯನ್ನು ಪೆÇಲೀಸರು ವಿವಿಧೆಡೆ ನಡೆಸುತ್ತಿದ್ದಾರೆ.
ಪಾಪ್ಯುಲರ್ ಫ್ರಂಟ್ ನಾಯಕರ ಬಂಧನ; ತನಿಖೆ ಚುರುಕುಗೊಳಿಸಿದ ಎನ್ಐಎ: ವೈಜ್ಞಾನಿಕ ಪರಿಶೀಲನೆಗಾಗಿ ಡಿಜಿಟಲ್ ಪುರಾವೆ ರವಾನೆ
0
ಸೆಪ್ಟೆಂಬರ್ 26, 2022





