HEALTH TIPS

ಆರು ತಿಂಗಳಲ್ಲಿ ಬಿಎಸ್ಸೆನ್ನೆಲ್ 5ಜಿ; 200ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ ಎಂದ ವೈಷ್ಣವ್

 

              ನವದೆಹಲಿ: ದೇಶದ 200ಕ್ಕೂ ಹೆಚ್ಚು ನಗರಗಳಲ್ಲಿ ಮುಂದಿನ ಆರು ತಿಂಗಳಲ್ಲಿ 5ಜಿ ಇಂಟರ್​ನೆಟ್ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಘೋಷಿಸಿದ್ದಾರೆ. ಶನಿವಾರ ಇಂಡಿಯಾ ಮೊಬೈಲ್ ಕಾಂಗ್ರೆಸ್​ನಲ್ಲಿ (ಐಎಂಸಿ) ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ ಬೆನ್ನಲ್ಲೇ ವೈಷ್ಣವಿ ಐಎಂಸಿ ಕಾರ್ಯಕ್ರಮದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

                   ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಸಂಸ್ಥೆ (ಬಿಎಸ್​ಎನ್​ಎಲ್) 2023 ಆಗಸ್ಟ್ 15ರಂದು ದೇಶದಲ್ಲಿ 5ಜಿ ಸೇವೆಗಳನ್ನು ಆರಂಭಿಸಲಿದೆ ಎಂದು ವೈಷ್ಣವ್ ಘೋಷಿಸಿದರು. ದೇಶದ ಶೇಕಡ 80ರಿಂದ 90 ಭಾಗಗಳಲ್ಲಿ ಈ ಸೇವೆ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ಸಚಿವರು ತಿಳಿಸಿದರು.

                      6ಜಿ ಸೇವೆಯಲ್ಲೂ ದೇಶ ಮುನ್ನಡೆ: ದೇಶವು 6ಜಿ ದೂರಸಂಪರ್ಕ ಸೇವೆಯಲ್ಲೂ ಮುನ್ನಡೆ ಸಾಧಿಸಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರನೇ ತಲೆಮಾರಿನ ವೈರ್​ಲೆಸ್ ತಂತ್ರಜ್ಞಾನದಲ್ಲಿ ಭಾರತ ಜಾಗತಿಕವಾಗಿ ಮುನ್ನಡೆ ಸಾಧಿಸುವುದನ್ನು ನೋಡುವುದು ಪ್ರಧಾನಿ ಮೋದಿ ಬಯಕೆಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಐಐಟಿ ಹೈದರಾಬಾದ್ ಬೂತ್​ಗೆ ಸಚಿವರು ಭೇಟಿ ನೀಡಿದರು.

                ಈ ಸಂಸ್ಥೆಯು 6ಜಿ ತಂತ್ರಜ್ಞಾನದ ಮೂಲ ಮಾದರಿಗಳನ್ನು ಪ್ರದರ್ಶಿಸಿದ್ದು, 5ಜಿಗೆ ಹೋಲಿಸಿದರೆ ನೆಟ್​ವರ್ಕ್ ವೇಗದಲ್ಲಿ 2-3 ಪಟ್ಟು ಸ್ಪೆಕ್ಟ್ರಲ್ ದಕ್ಷತೆಯನ್ನು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. 6ಜಿ ಅಭಿವೃದ್ಧಿಗೆ ಸಹಾಯ ಮಾಡುವ ಕೆಲವು ಪೇಟೆಂಟ್​ಗಳನ್ನು ಸಂಸ್ಥೆಗೆ ನೀಡಲಾಗಿದೆ. ತಂತ್ರಜ್ಞಾನವು ಮುಂದುವರಿದಂತೆ ಹೊಸ ಪೇಟೆಂಟ್​ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು 6ಜಿ ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ಐಐಟಿ ಹೈದರಾಬಾದ್ ಪ್ರಾಧ್ಯಾಪಕ ಕಿರಣ್ ಕುಚಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries