ಕಾಸರಗೋಡು: ಗಡಿನಾಡ ಕಲಾವಿದರು ರಂಗಸಂಸ್ಥೆ ಕೋಟೆಕಣಿ ಕಾಸರಗೋಡು ಇದರ ಮಹಾಸಭೆ ಸಂಸ್ಥೆಯ ಕಾರ್ಯಾಲಯದಲ್ಲಿ ನಿನ್ನೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ದಿವಾಕರ ಅಶೋಕನಗರ ವರದಿ ಹಾಗೂ ಕೋಶಾಧಿಕಾರಿ ಶ್ರೀಕಾಂತ್ ಕಾಸರಗೋಡು ಲೆಕ್ಕಪತ್ರ ಮಂಡಿಸಿದರು.
2022-23 ನೇ ಸಾಲಿನ ಪದಾಧಿಕಾರಿಗಳನ್ನು ಈ ಸಂದರ್ಭ ಆರಿಸಲಾಯಿತು. ವರಪ್ರಸಾದ್ ಕೋಟೆಕಣಿ(ಅಧ್ಯಕ್ಷ), ಪಿ.ದಿವಾಕರ ಅಶೋಕನಗರ(ಉಪಾಧ್ಯಕ್ಷ), ಸುಕುಮಾರ ಕೆ.ಕಣ್ಣನ್(ಕಾರ್ಯದರ್ಶಿ), ಉದಯಕುಮಾರ್ ಕುಮಾರಧಾರ(ಜೊತೆಕಾರ್ಯದರ್ಶಿ), ಶ್ರೀಕಾಂತ ಕಾಸರಗೋಡು(ಖೋಶಾಧಿಕಾರಿ), ರಾಧಾಕೃಷ್ಣ ಕೆ. ಹಾಗೂ ರಾಜೇಶ್ ಆಳ್ವ (ಸಂಚಾಲಕರು), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಯಶ್ರೀ ದಿವಾಕರ, ಜನಾರ್ಧನ, ರಮೇಶ್ ಶೆಟ್ಟಿ, ನಾರಾಯಣಮೂರ್ತಿ, ರವೀಂದ್ರ ರೈ ಮಲ್ಲಾವರ, ಸುಂದರ ಮವ್ವಾರು, ಚಂದ್ರಕುಮಾರ್, ರಾಜಾನಂದ, ನಾರಾಯಣ, ಗೌರವಾಧ್ಯಕ್ಷರಾಗಿ ವಾಮನ ಮುಳ್ಳಂಗೋಡು, ಯತೀಶ್ ಕುಮಾರ್ ರೈ ಇವರನ್ನು ಆಯ್ಕೆಮಾಡಲಾಯಿತು.
ಭಾರತೀ ಬಾಬು, ನಾರಾಯಣ, ಗಣೇಶ್ ಕೆ.ಬಿ, ಕುಶಲಕುಮಾರ್ ಉಪಸ್ಥಿತರಿದ್ದರು. ಪಿ.ದಿವಾಕರ ಸ್ವಾಗತಿಸಿ, ಉದಯಕುಮಾರ್ ವಂದಿಸಿದರು.
ಗಡಿನಾಡ ಕಲಾವಿದರು ರಂಗಸಂಸ್ಥೆಯ ಮಹಾಸಭೆ: ಪದಾಧಿಕಾರಿಗಳ ಆಯ್ಕೆ
0
ಅಕ್ಟೋಬರ್ 16, 2022


