ಬದಿಯಡ್ಕ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾಟ್ರಸ್ಟ್ ನೇತೃತ್ವದಲ್ಲಿ ಭಗವದ್ಭಕ್ತರ ಸಹಕಾರದೊಂದಿಗೆ ಬದಿಯಡ್ಕ ಮೇಲಿನ ಪೇಟೆಯ ಕಾಸರಗೋಡು ರಸ್ತೆಯ ಪೆರ್ಮುಖದಲ್ಲಿ ನಿರ್ಮಾಣವಾಗಲಿರುವ ನೂತನ ಅಯ್ಯಪ್ಪ ಮಂದಿರದ ವಿಜ್ಞಾಪನಾ ಪತ್ರ ಬಿಡುಗಡೆ, ನಿಧಿಸಂಚಯನ ಕಾರ್ಯಕ್ರಮ ಭಾನುವಾರ ಬೆಳಗ್ಗೆ ನಡೆಯಿತು.
ಮಂದಿರ ನಿರ್ಮಾಣಗೊಳ್ಳಲಿರುವ ಬದಿಯಡ್ಕ ಪೇಟೆಯ ಎತ್ತರದ ಸ್ಥಳಕ್ಕೆ `ಶಬರಿಗಿರಿ' ನಾಮಕರಣವನ್ನೂ ಈ ಸಂದರ್ಭ ಮಾಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ದೀಪಬೆಳಗಿಸಿ, ಶಬರಿಗಿರಿ ನಾಮಫಲಕವನ್ನು ಅನಾವರಣಗೊಳಿಸಿದರು. ಇದೇ ಸಂದಭರ್À ಧಾರಾಕಾರ ಮಳೆಸುರಿಯುತ್ತಿದ್ದಂತೆ ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ವಿಜ್ಞಾಪನೆ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಇಲ್ಲಿ ಹೆಚ್ಚು ಮಾತನಾಡಬೇಡಿ, ಕಾರ್ಯವನ್ನು ಮುಂದುವರಿಸಿ ಎಂಬ ಸೂಚನೆಯು ಈ ಮಳೆಯ ಮೂಲಕ ದೇವರು ನೀಡಿದ್ದಾರೆ. ತ್ವರಿತಗತಿಯ ಕೆಲಸವನ್ನು ಮುಂದುವರಿಸಲು ಎಲ್ಲರೂ ಜೊತೆಗೂಡೋಣ ಎಂದು ಶುಭಹಾರೈಸಿ ತಮ್ಮ ದೇಣಿಗೆಯನ್ನೂ ನೀಡಿದರು.
ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಣ್ಯಕ್ಷೇತ್ರಗಳಿಗೆ ತೆರಳಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಮ್ಮೂರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಕಲಿಯುಗದಲ್ಲಿ ಅಯ್ಯಪ್ಪ ಭಕ್ತರು ಭಜನಾಮಂದಿರಗಳನ್ನು ನಿರ್ಮಿಸುತ್ತಿದ್ದು ಜನರಲ್ಲಿ ಧಾರ್ಮಿಕ ಶ್ರದ್ಧೆ ಮೂಡುವಂತೆ ಮಾಡಿದೆ. ಪ್ರಶಸ್ತವಾದ ಸ್ಥಳದಲ್ಲಿ ಅಯ್ಯಪ್ಪನ ಮಂದಿರ ನಿರ್ಮಾಣವಾಗುತ್ತಿದ್ದು ಶಬರಿಗಿರಿ ಎತ್ತರಕ್ಕೇರಲಿದೆ ಎಂದರು.
ರಿಯಾಯಿತಿ ದರದಲ್ಲಿ ಸ್ಥಳದಾನಗೈದ ಪೆರ್ಮುಖ ಉದಯ ಭಟ್ ಕೋಡಿಕ್ಕಲ್ ಮಂಗಳೂರು ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಉಪಸ್ಥಿತರಿದ್ದರು. ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಆಡಳಿತ ಟ್ರಸ್ಟಿ ಕೆ. ಜಗದೀಶ್ ಕಾಮತ್, ಹಿರಿಯರಾದ ಗೋಪಾಲ ಮಾಸ್ತರ್ ಬದಿಯಡ್ಕ, ಸಾಯಿರಾಂ ಶ್ರೀ ಕೃಷ್ಣ ಭಟ್ ಕಿಳಿಂಗಾರು, ಬಾಲಕೃಷ್ಣ ಭಟ್ ಕೆ. ನೀರ್ಚಾಲು, ಧಾರ್ಮಿಕ ಮುಂದಾಳು ಟಿ.ಸುಬ್ರಹ್ಮಣ್ಯ ಭಟ್ ತಲೇಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಹಿಂಪ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಬಿಂದು ಜ್ಯುವೆಲ್ಲರಿ ಮಾಲಕ ಅಭಿಲಾಷ್ ಕೆ.ವಿ., ಕಾಸರಗೋಡು ವರದರಾಜ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಿ.ಗಣೇಶ್ ಪ್ರಭು, ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರಿಪ್ರಸಾದ್ ರೈ ಪುತ್ರಕ್ಕಳ, ಧಾರ್ಮಿಕ ಮುಂದಾಳು ಎಸ್.ಎನ್.ಮಯ್ಯ ಬದಿಯಡ್ಕ, ಉಪನ್ಯಾಸಕ ರಾಜೇಶ್ ಚಂಬಲ್ತಿಮಾರ್, ವಿದ್ಯಾಭ್ಯಾಸ ಇಲಾಖೆಯ ನಿವೃತ್ತ ಅಧೀಕ್ಷಕ ಕೇಶವ ಪ್ರಸಾದ ಕೆ.ಬದಿಯಡ್ಕ, ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಧಾರ್ಮಿಕ ಮುಂದಾಳು ಪಿ.ಜಿ.ಚಂದ್ರಹಾಸ ರೈ ಪೆರಡಾಲಗುತ್ತು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು, ಹಿರಿಯ ಗುರುಸ್ವಾಮಿ ಎಂ.ನಾರಾಯಣ, ಧಾರ್ಮಿಕ ಮುಂದಾಳುಗಳಾದ ತಿರುಪತಿ ಕುಮಾರ್ ಭಟ್, ಮಂಜುನಾಥ ಮಾನ್ಯ, ವಾಸ್ತುಶಿಲ್ಪಿ ಗೋಪಾಲ ಆಚಾರಿ ಚಂದ್ರಂಪಾರೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಗುರುಪ್ರಸಾದ್ ರೈ ಕೆ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಪೈ. ಬಿ. ವಂದಿಸಿದರು. ಅಧ್ಯಕ್ಷ ನರೇಂದ್ರ ಬಿ.ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನಿರೂಪಿಸಿದರು.
`ಶಬರಿಗಿರಿ' ನಾಮಫಲಕ ಅನಾವರಣ, ವಿಜ್ಞಾಪನಾಪತ್ರ ಬಿಡುಗಡೆ, ನಿಧಿಸಂಚಯನ: ಬದಿಯಡ್ಕದಲ್ಲಿ ನಿರ್ಮಾಣವಾಗಲಿದೆ ನೂತನ ಅಯ್ಯಪ್ಪ ಮಂದಿರ
0
ಅಕ್ಟೋಬರ್ 16, 2022
Tags

.jpg)
