ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಅಕ್ಟೋಬರ್ ತಿಂಗಳ ಸಭೆ ಇತ್ತೀಚೆಗೆ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು.
ಧ್ವಜಾರೋಹಣ, ಶಂಖನಾದ ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದ್ದರು. ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ವರದಿ, ಮಹಾಮಂಡಲ ಸುತ್ತೋಲೆ ಮತ್ತು ಮುಳ್ಳೇರಿಯ ಮಂಡಲ ಸಭೆಯ ವರದಿಯನ್ನು ವಾಚಿಸಿದರು.
ವಲಯ ಕೋಶಾಧಿಕಾರಿ ರಾಜಗೋಪಾಲ ಅಮ್ಮಂಕಲ್ಲು ಸೆಪ್ಟೆಂಬರ್ ತಿಂಗಳ ಲೆಕ್ಕಪತ್ರವನ್ನು ಮಂಡಿಸಿದರು. ವೈದಿಕ ಪ್ರಧಾನ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಉಪಾಸನಾ ವಿವರಗಳನ್ನು ನೀಡಿದರು. ಮಾತೃಪ್ರಧಾನೆ ಲಲಿತಾ ಮಾಣಿ, ಬಿಂದು - ಸಿಂಧು ಪ್ರಧಾನ ನರೇಶ್ ಬಾಯಾಡಿ ತಮ್ಮ ವಿಭಾಗದ ವರದಿಗಳನ್ನು ನೀಡಿದರು.
ವೀಕ್ಷರಕಾಗಿ ಆಗಮಿಸಿದ ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಗೋಕರ್ಣದ ಅಶೋಕೆಯಲ್ಲಿ ಕಾರ್ಯಾಚರಿಸುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿಗಳನ್ನು ನೀಡಿದರು. ಗುಂಪೆ ವಲಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು ಇತ್ತೀಚೆಗೆ ಬಿಡುಗಡೆಯಾದ ಸ್ವಯಂವರ ಹವ್ಯಕ ಕಾದಂಬರಿಯ ಲೇಖಕಿ ಪ್ರಸನ್ನಾ ಚೆಕ್ಕೆಮನೆ ಅವರಿಗೆ ಮುಳ್ಳೇರಿಯ ಮಂಡಲದ ಪರವಾಗಿ ಅಭಿನಂದನೆ ಸಲ್ಲಿಸಿದರು.ಅ.30 ರಂದು ಗೋಕರ್ಣದ ಅಶೋಕೆಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದ ಕುರಿತಾದ ಮಾಹಿತಿ ನೀಡಿ ವಲಯದ ಎಲ್ಲಾ ಕಾರ್ಯಕರ್ತರೂ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಮಾಣಿಮಠದ ಶಿಲಾಮಯ ಗರ್ಭಗುಡಿ ನಿರ್ಮಾಣದ ನಿಧಿ ಸಂಗ್ರಹ , ಕಾರ್ಯಕರ್ತರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ವಲಯದ ಪ್ರತೀ ಮನೆಗೂ ತಲುಪಿಸುವ ಅಭಿಯಾನವನ್ನು ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ನವೆಂಬರ್ ತಿಂಗಳಲ್ಲಿ ವಲಯೋತ್ಸವ ನಡೆಸುವ ವಿಚಾರವನ್ನು ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿ ಇದರ ರೂಪುರೇμÉಗಳ ಬಗ್ಗೆ ನಿರ್ಧಾರಕ್ಕೆ ಬರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶ್ರೀಮುಖದ ಮಾತೃತ್ವಮ್ ಲೇಖಕಿ ಪ್ರಸನ್ನಾ ವಿ ಚೆಕ್ಕೆಮನೆ ಅವರ ಸಾಹಿತ್ಯಕ್ಷೇತ್ರದ ಸಾಧನೆಗೆ ಶುಭಹಾರೈಸಿದ ಸಭಾಧ್ಯಕ್ಷರು ಶ್ರೀಮಠದ ಎಲ್ಲಾ ಯೋಜನೆಗಳಿಗೆ ವಲಯದ ಪ್ರತಿಯೊಬ್ಬರ ಸಹಕಾರವನ್ನು ಕೋರಿದರು. ಮುಳ್ಳೇರಿಯ ಮಂಡಲ ಅಧ್ಯಕ್ಷರಾಗಿ, ವಿವಿವಿಯ ನಿರ್ದೇಶಕರಾಗಿ ಮತ್ತು ಶ್ರೀಮಠದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಯ ಚೇತನ ಪ್ರೊ. ಟಿ. ಶ್ರೀಕೃಷ್ಣ ಭಟ್ ಅವರ ಆತ್ಮಕ್ಕೆ ವಿಷ್ಣುಸಾಯೂಜ್ಯ ಪ್ರಾಪ್ತಿಗಾಗಿ ಶ್ರೀರಾಮ ತಾರಕ ಮಂತ್ರ ಜಪಿಸಲಾಯಿತು. ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
ಗುಂಪೆ ವಲಯ ಸಭೆ
0
ಅಕ್ಟೋಬರ್ 16, 2022
Tags

.jpg)
