ಕುಂಬಳೆ: ಭಾರತೀಯ ಜನತಾ ಪಕ್ಷ ಪುತ್ತಿಗೆ ಪಂಚಾಯತಿ ಸಮಿತಿಯ ಸಭೆ ಪಕ್ಷದ ಸೀತಾಂಗೋಳಿ ಕಚೇರಿಯಲ್ಲಿ ನಡೆಯಿತು. ಅಕ್ಟೋಬರ್ 21ರಂದು ಕುಂಬಳೆ ಪೇಟೆಯಲ್ಲಿ ನಡೆಯಲಿರುವ "ದೇಶ ರಕ್ಷಾ ಸಂಗಮÀ" ವನ್ನು ಯಶಸ್ವಿಗೊಳಿಸಲು ವಿವಿಧ ಬೂತ್ ಸಮಿತಿಗಳ ಸಹಕಾರದೊಂದಿಗೆ ಅತಿಹೆಚ್ಚಿನ ಕಾರ್ಯಕರ್ತರನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಪಂಚಾಯತಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ ವಿ ಭಟ್, ಪಂಚಾಯತಿ ಪ್ರಭಾರಿ ಮುರಳಿಧರ ಯಾದವ್ ನಾಯ್ಕಾಪು, ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ ಪುತ್ತಿಗೆ ಸಮಿತಿ ಸಭೆ
0
ಅಕ್ಟೋಬರ್ 15, 2022



.jpg)
