ಕುಂಬಳೆ: ಕಳೆದ ಅಕ್ಟೋಬರ್ 12ರಂದು ಪುತ್ತಿಗೆ ಗ್ರಾಮ ಪಂಚಾಯತಿಯ ಕೆಲವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಮಾಸ್ಟರ್ ರೋಲ್ ನಲ್ಲಿ ಸಹಿ ಹಾಕಿದ ನಂತರ ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ತೆರಳಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಯೋಜನೆಯ ಮುಖಾಂತರ ಕಾರ್ಮಿಕರಿಗೆ ಇನ್ನಷ್ಟು ಸವಲತ್ತು ದೊರಕಿಸುವ ಪ್ರಯತ್ನದಲ್ಲಿರುವ ಸಂದರ್ಭದಲ್ಲಿ ಎಡಬಲ ರಂಗಗಳು ಕಾರ್ಮಿಕರಲ್ಲಿ ಸುಳ್ಳು ಪ್ರಚಾರ ನಡೆಸಿ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಪಂಚಾಯತಿ ಸಮಿತಿ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಜನಾರ್ದನ ಕಣ್ಣೂರು ಆರೋಪಿಸಿದ್ದಾರೆ. ತಪ್ಪಿತಸ್ಥ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಉದ್ಯೋಗ ಖಾತರಿ ಬಗ್ಗೆ ಅಪಪ್ರಚಾರ: ನಿಯಮ ಪಾಲಿಸದವರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ಆಗ್ರಹ
0
ಅಕ್ಟೋಬರ್ 15, 2022
Tags




