ಕುಂಬಳೆ: ಪುತ್ತಿಗೆ ಮುಹಿಮ್ಮತ್ ನ ವಿದ್ಯಾರ್ಥಿ ಹಾಫಿಲ್ ಮುಹಮ್ಮದ್ ಮಿಸ್ಬಾ ಅವರು ರೂಬಿಕ್ಸ್ ಕ್ಯೂಬ್ ನಲ್ಲಿ (3*3) ಅಂತರಾಷ್ಟ್ರೀಯ ದಾಖಲೆ ಪುಸ್ತಕವನ್ನು ಗೆದ್ದು ಹಿರಿಮೆ ತಂದಿದ್ದಾನೆ.
ಮಿಸ್ಬಾ 4.36 ನಿಮಿಷಗಳಲ್ಲಿ ಹತ್ತು ರೂಬಿಕ್ಸ್ ಕ್ಯೂಬ್‍ಗಳನ್ನು (3*3) ಪರಿಹರಿಸುವ ಮೂಲಕ ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್ ಅನ್ನು ಗೆದ್ದಿರುವನು. ಮುಹಮ್ಮದ್ ಮಿಸ್ಬಾ ಕರ್ನಾಟಕದ ಮಂಜನಾಡಿಯ ಅಬ್ದುಲ್ ಖಾದರ್ ನಿಝಾಮಿ ಮತ್ತು ಆಯೇμÁ ಮೈಮುನಾ ದಂಪತಿಯ ಪುತ್ರ.
2016 ರಿಂದ ಮುಹಿಮ್ಮತ್ ಹಿಫ್ಲುಲ್ ಕುರಾನ್ ಕಾಲೇಜು ಮತ್ತು ಶಾಲೆಯ ವಿದ್ಯಾರ್ಥಿಯಾಗಿರುವ ಮಿಸ್ಬಾ ರೂಬಿಕ್ಸ್ ಕ್ಯೂಬ್‍ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಬಿಡುವಿನ ವೇಳೆಯಲ್ಲಿ ತನ್ನ ಮಕ್ಕಳೊಂದಿಗೆ ಈ ಆಟವನ್ನು ಅಭ್ಯಾಸ ಮಾಡುತ್ತಿದ್ದಾನೆ.
ಆರಂಭದಲ್ಲಿ ರೂಬಿಕ್ಸ್ ಕ್ಯೂಬ್ ನ್ನು ಪರಿಹರಿಸಲು 3 ನಿಮಿಷಗಳನ್ನು ತೆಗೆದುಕೊಂಡಿದ್ದ. ನಿರಂತರ ತರಬೇತಿಯ ಫಲವಾಗಿ ಇದೀಗ 25 ಸೆಕೆಂಡ್ ಗಳಲ್ಲಿ ಪರಿಹರಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಮಿಸ್ಬಾ.
ಮಿಸ್ಬಾ 4.36 ನಿಮಿಷಗಳಲ್ಲಿ 10 ರೂಬಿಕ್ಸ್ ಕ್ಯೂಬ್‍ಗಳನ್ನು (3*3) ಪರಿಹರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ತನ್ನ ಶಾಲಾ ಕೆಲಸದ ಜೊತೆಗೆ, ಕುರಾನ್ ಅಧ್ಯಯನದಲ್ಲಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದ ಮಿಸ್ಬಾ, ಮೂರನೇ ರ್ಯಾಂಕ್‍ನೊಂದಿಗೆ ಹಫ್ಲ್ ಪದವಿಯನ್ನು ಸಹ ಪಡೆದಿದ್ದಾನೆ.
ಈ ವಿದ್ಯಾರ್ಥಿಯು ಕ್ಯಾಲಿಗ್ರಫಿ ಮತ್ತು ಚಿತ್ರಕಲೆಯಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಲು ಸಮರ್ಥನಾಗಿದ್ದಾನೆ. ಮಿಸ್ಬಾ ಕನ್ನಡ, ಮಲಯಾಳ ಮತ್ತು ಇಂಗ್ಲಿμï ಭಾμÉಗಳನ್ನು ಸುಲಲಿತವಾಗಿ ಬರೆಯಲು ಮತ್ತು ಮಾತನಾಡಲು ಬಲ್ಲ. ಮಿಸ್ಬಾ 10 ನೇ ತರಗತಿ ಪರೀಕ್ಷೆಯಲ್ಲಿ 99 ಶೇ. ಅಂಕಗಳನ್ನು ಗಳಿಸಿದ್ದು, ಈಗ ಮುಹಿಮ್ಮತ್‍ನ ಇಸ್ಲಾಮಿಕ್ ಸೈನ್ಸ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾನೆ.




.jpg)
