ಕಾಸರಗೋಡು: ಭಾಷಾಂತರ ಎನ್ನುವುದು ಕಲ್ಪನೆಯ ಪುನಃ ಸೃಷ್ಟಿಯಾಗಿದ್ದು, ಮೂಲಕೃತಿಯಿಂದ ಪ್ರಚೋದನೆಗೊಂಡು ಕವಿ ಇನ್ನೊಂದು ಭಾಷೆಗೆ ಭಾಷಾಂತರ ಮಾಡುತ್ತಾನೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪೆÇ್ರ. ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಅವರು ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ (ರಿ), ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಮಲಯಾಳಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಸಹಕಾರದೊಂದಿಗೆ ಕಾಸರಗೋಡು ಸರ್ಕಾರಿಕಾಲೇಜಿನಲ್ಲಿ ಆಯೋಜಿಸಿದ ಮೂರು ದಿನಗಳ ಭಾಷಾಂತರ ಕಾರ್ಯಗಾರ ಮತ್ತು ಬಹುಭಾಷಾ ಕವಿಸಂಗಮದ ಗೋಷ್ಠಿಯಲ್ಲಿ ಅವರು ಅನುವಾದದ ವೈಧಾನಿಕತೆ ಎನ್ನುವ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಭಾಷಾಂತರ ಎಂಬುದು ಕೊಡುಕೊಳ್ಳುವ ಪ್ರಕ್ರಿಯೆ. ಬದಲಾಗುತ್ತಿರುವ ಹೊಸ ಕಾಲಘಟ್ಟಕ್ಕೆ ಭಾಷಾಂತರ ಹೆಚ್ಚು ಪ್ರಸ್ತುತವಾಗಿದೆ. ಮೂಲಕೃತಿಯನ್ನು ಭಾಷಾಂತರಿಸುವಾಗ ಕವಿ ಅದನ್ನು ಹೆಚ್ಚು ಓದಿ ಅರ್ಥೈಸಿಕೊಂಡಾಗ ಅದರ ಸಾಮಾನ್ಯ ಅರ್ಥ ಹಾಗೂ ಕೋಶದಲ್ಲಿರುವ ಅರ್ಥವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಒಬ್ಬ ಉತ್ತಮ ಭಾಷಾಂತರಕಾರನಾಗಬೇಕಾದರೆ ಉತ್ತಮ ಓದುಗನೂ ಆಗಿರಬೇಕು ಎಂದು ತಿಳಿಸಿದರು.
ಈ ಸಂದರ್ಭ ಪೆÇ್ರ. ಪ್ರಮೋದ್ ಮುತಾಲಿಕ್ ಅವರು ಎರಡು ಇಂಗ್ಲಿಷ್ ಕವನಗಳಾದ ರಾಬರ್ಟ್ ಫ್ರಾಸ್ಟ್ ನ ರೋಡ್ ನಾಟ್ ಟೇಕನ್ ಮತ್ತು ಅರುಣ್ ಕೋಲಾಟರ್ ಅವರ ದ ಪ್ರೀಸ್ಟ್ಸ್ ಸನ್ ಗಳ ಭಾಷಾಂತರವನ್ನು ಪ್ರಾಯೋಗಿಕವಾಗಿ ಮಾಡಿ ವಿವರಿಸಿದರು. ಪೆÇ್ರ.ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಡಾ. ಆಶಾಲತಾ ಸಿ. ಕೆ.ಸ್ವಾಗತಿಸಿದರು. ಡಾ. ವೇದಾವತಿ ವಂದಿಸಿದರು.
ಭಾಷಾಂತರ ಎಂಬುದು ಕಲ್ಪನೆಯ ಪುನ: ಸೃಷ್ಟಿ: ಪ್ರೊ. ಪ್ರಮೋದ್ ಮುತಾಲಿಕ್
0
ಅಕ್ಟೋಬರ್ 15, 2022
Tags




