ನವದೆಹಲಿ:
ರಸ್ತೆಗಳ ಗುಣಮಟ್ಟದ ಕುರಿತು ದೂರುಗಳು ಬರುತ್ತಿರುವ ಕಾರಣ, ಮಳೆಗಾಲ ಮತ್ತು ಆ ನಂತರ
ಹೆದ್ದಾರಿಗಳ ಸ್ಥಿತಿಗತಿಗಳ ಬಗ್ಗೆ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಲು
'ಸುಖದ್‌ಯಾತ್ರಾ' ಸ್ಮಾರ್ಟ್‌ಫೋನ್ ಆಯಪ್ ಅನ್ನು ಮೇಲ್ದರ್ಜೆಗೇರಿಸಲು ಕೇಂದ್ರ ರಸ್ತೆ
ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ.
ಹೆದ್ದಾರಿಗಳ
ಸ್ಥಿತಿ ಮತ್ತು ದುರಸ್ತಿ ಕಾಮಗಾರಿಗಳು ನಡೆದಿವೆಯೇ, ಇಲ್ಲವೊ ಎಂಬ ಮಾಹಿತಿಯನ್ನು ಜನರು ಈ
ಆಯಪ್ ಮೂಲಕ ಹಂಚಿಕೊಳ್ಳಬಹುದಾಗಿದೆ ಎಂದೂ ಸಚಿವಾಲಯ ಹೇಳಿದೆ.
ಭಾರತೀಯ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಈ ಆಯಪ್‌ನಲ್ಲಿ ಬಳಕೆದಾರರು
ಹೆದ್ದಾರಿಗಳ ಕುರಿತ ಇತರ ಮಾಹಿತಿಗಳನ್ನೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.