ಕಾಸರಗೋಡು: ಕಾರ್ಮಿಕ ಇಲಾಖೆ ಆಶ್ರಯದಲ್ಲಿ 'ಕವಚ'ಹೆಸರಿನಲ್ಲಿ ಅತಿಥಿ ಕಾರ್ಮಿಕರಿಗಾಗಿ ಮಾದಕ ವಸ್ತು ವಿರೋಧಿ ಅಭಿಯಾನ ನಡೆಸಲಾಯಿತು. ಅಬಕಾರಿ, ಆರೋಗ್ಯ, ಪೆÇಲೀಸ್, ಪಂಚಾಯಿತಿ, ಪ್ಯಾಂಟೆಕ್, ವಲಸೆ ಭದ್ರತಾ ಯೋಜನೆ, ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಮಿಕ ಇಲಾಖೆ ಕಲ್ಯಾಣ ನಿಧಿ ಮಂಡಳಿ ಸಹಯೋಗದಲ್ಲಿ ಅಭಿಯಾನ ನಡೆಸಲಾಯಿತು.
ಇತರ ರಾಜ್ಯಗಳ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಪಾನ್‍ಪರಾಗ್, ಗುಟ್ಕಾ, ಗಾಂಜಾ ಸೇರಿದಂತೆ ವಿವಿಧ ಮಾದಕ ಪದಾರ್ಥಗಳ ಬಳಕೆ ಹಿನ್ನೆಲೆಯಲ್ಲಿ ಅಭಿಯಾನ ಆಯೋಜಿಸಲಾಗಿತ್ತು.
ಅತಿಥಿ ಕಾರ್ಮಿಕರಿಗೆ ಸೈಕಲ್ ರ್ಯಾಲಿ, ಪಾದಯಾತ್ರೆ, ಜಾಗೃತಿ ತರಗತಿ, ವೈದ್ಯಕೀಯ ಶಿಬಿರ ಹಾಗೂ ವಿವಿಧ ಕಲಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಾದಕ ವಸ್ತು ವಿರೋಧಿ ಸಂದೇಶಗಳನ್ನು ಒಳಗೊಂಡ ಕರಪತ್ರಗಳನ್ನು ಕಾರ್ಮಿಕರಿಗೆ ವಿತರಿಸಲಾಯಿತು. ಈ ಮೂಲಕ ಮಾದಕದ್ರವ್ಯದ ದಾಸ್ಯದಿಂದಕಾರ್ಮಿಕರನ್ನು ಪರುಮಾಡುವ ಅಭಿಯಾನ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.
ಅತಿಥಿ ಕಾರ್ಮಿಕರಿಗಾಗಿ ಮಾದಕ ವಸ್ತು ವಿರೋಧಿ ಅಭಿಯಾನ
0
ಅಕ್ಟೋಬರ್ 26, 2022
Tags




