ಮುಳ್ಳೇರಿಯ: ಆಧುನಿಕ ಕೇರಳ ಸಮಾಜವನ್ನು ಕಟ್ಟುವಲ್ಲಿ ಸಾರ್ವಜನಿಕ ಶಾಲೆಗಳ ಪಾತ್ರ ಮಹತ್ತರವಾಗಿದೆ ಎಂದು ಸ್ಥಳೀಯಾಡಳಿತ,ಅಬಕಾರಿ ಸಚಿವ ಎಂ.ಬಿ.ರಾಜೇಶ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಅಂಗವಾಗಿ ಕೋಳಿಯಡ್ಕ ಸರ್ಕಾರಿ ಯುಪಿ ಶಾಲೆಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಸುವರ್ಣ ಮಹೋತ್ಸವ ಆಚರಣೆಗೂ ಸಚಿವರು ಈ ಸಂದರ್ಭ ಚಾಲನೆ ನೀಡಿದರು. ಸಾರ್ವಜನಿಕ ಶಾಲೆಗಳು ಶಿಕ್ಷಣವನ್ನು ಮಾತ್ರವಲ್ಲದೆ ಜಾತ್ಯತೀತ ಸಮಾಜವನ್ನು ರಕ್ಷಿಸುತ್ತವೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಮೂಲಕ ಸರ್ಕಾರ ಶಾಲೆಗಳಲ್ಲಿ ಊಹೆಗೂ ನಿಲುಕದ ಪ್ರಗತಿ ಸಾಧಿಸಿದೆ ಎಂದರು.
ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕೋಳಿಯಡ್ಕ ಸರ್ಕಾರಿ ಯುಪಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಹರಿದಾಸನ್ ವರದಿ ಮಂಡಿಸಿದರು. ಚೆಮ್ಮನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಬ್ರಾಹಿಂ ಮನ್ಸೂರ್ ಕುರುಕಳ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಸುದ್ದೀನ್ ತೆಕ್ಕಿಲ್, ರಾಮ ಗಂಗಾಧರನ್, ವಾರ್ಡ್ ಸದಸ್ಯರಾದ ಇ.ಮನೋಜ್ ಕುಮಾರ್, ಟಿ.ಜಾನಕಿ, ರೇಣುಕಾ ಭಾಸ್ಕರನ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುμÁ್ಪ, ಕಿಲಾ ಮುಖ್ಯ ವ್ಯವಸ್ಥಾಪಕ ಆರ್.ಎಸ್.ಅನಿಲ್ ಕುಮಾರ್, ಜಿಲ್ಲಾ ಸಂಚಾಲಕ ವಿದ್ಯಾಕಿರಣ್. ಪಿ.ದಿಲೀಪ್ ಕುಮಾರ್, ಎಸ್‍ಎಸ್‍ಕೆ ಜಿಲ್ಲಾ ಸಂಯೋಜಕ ನಾರಾಯಣ ದೇಲಂಪಾಡಿ, ಅಪರ ಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾರ್ಡ್, ಜಿಲ್ಲಾ ಆರ್‍ಸಿಬಿಪಿಸಿಬಿ ಟಿ.ಪ್ರಕಾಶನ್ ಮತ್ತು ಡಯಟ್ ಉಪನ್ಯಾಸಕ ವಿನೋದ್ ಕುಮಾರ್ ಪೆರುಂಬಳ ಸಮಾರಂಭದಲ್ಲಿ ಭಾಗವಹಿಸಿದ್ದರು. ಚೆಮ್ಮನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಸ್ವಾಗತಿಸಿ, ಸಿಬ್ಬಂದಿ ಕಾರ್ಯದರ್ಶಿ ಜಿ.ವಿ.ವಿಜಿಮೋನ್ ವಂದಿಸಿದರು. ವಿದ್ಯಾಕಿರಣಂ ಯೋಜನೆಯಲ್ಲಿ ಒಂದು ಕೋಟಿ ಕಿಪ್ಬಿ ನಿಧಿಯನ್ನು ವ್ಯಯಿಸಿ ಕೋಳಿಯಡ್ಕ ಶಾಲೆಗೆ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಎರಡೂ ಮಹಡಿಗಳಲ್ಲಿ ತಲಾ 4 ತರಗತಿ ಕೊಠಡಿಗಳಿವೆ. ನಿರ್ಮಾಣ ಕಾರ್ಯವು ಸೆಪ್ಟೆಂಬರ್ 7, 2021 ರಂದು ಪ್ರಾರಂಭವಾಯಿತು.




.jpeg)
.jpeg)
