ಕುಂಬಳೆ: ಪ್ರಾದೇಶಿಕ ಸಬಲೀಕರಣದ ಬಹುದೊಡ್ಡ ಸಾಧನೆ ಶೈಕ್ಷಣಿಕ ಪ್ರಗತಿಯಾಗಿದೆ. ಜ್ಞಾನವು ನಮ್ಮನ್ನು ಅಜ್ಞಾನ ಮತ್ತು ಅಂಧಕಾರದಿಂದ ಹೊರ ಬರಲು ಕಾರಣವಾಗುತ್ತದೆ ಎಂದು ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಹೇಳಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಭಿವೃದ್ಧಿ ಪಡಿಸಿದ ಮೈಲ್ಸ್ ಟು ಮೈ ಸ್ಕೂಲ್ ಎಂಬ ಕಾರ್ಯಕ್ರಮವನ್ನು ಮೊಗ್ರಾಲ್ ಸರ್ಕಾರಿ .ವಿ.ಎಚ್ ಎಸ್ ಎಸ್ ಶಾಲೆಯಲ್ಲಿ ಉದ್ಘಾಟಿಸಿ ಸಚಿವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇರಳವು ವಿಶ್ವಕ್ಕೆ ಮಾದರಿಯಾಗಿದೆ. ಕೇರಳದಲ್ಲಿ ಎಲ್ಲಾ ಮಕ್ಕಳಿಗೂ ಶಾಲಾ ಪ್ರವೇಶ ಸಾಧ್ಯವಾಗಿದೆ. ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡ ಸಚಿವರು, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಆಗಮನದೊಂದಿಗೆ ಕೇರಳದಲ್ಲಿ ಶೈಕ್ಷಣ ಕ್ಷೇತ್ರವು ಪ್ರಗತಿಯ ಹೆಜ್ಜೆಯನ್ನಿಟ್ಟಿದೆ ಎಂದರು. ಈ ಯಜ್ಞದ ಅಂಗವಾಗಿ ಉತ್ತಮ ಕಟ್ಟಡ, ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣವೂ ಸರ್ಕಾರಿ ಕ್ಷೇತ್ರದಲ್ಲಿ ಲಭಿಸುತ್ತಿದ್ದು, ಲಕ್ಷಗಟ್ಟಲೆ ಮಕ್ಕಳು ಸರ್ಕಾರಿ ಅನುದಾನಿತ ಕ್ಷೇತ್ರಕ್ಕೆ ಆಕರ್ಷಿತರಾಗಿದ್ದಾರೆ. ಇಂದು ಕೇರಳದಲ್ಲಿ ಮಕ್ಕಳು ಎದುರಿಸುತ್ತಿರುವ ದೊಡ್ಡ ಬೆದರಿಕೆ ಡ್ರಗ್ಸ್. ಅದರ ವಿರುದ್ಧ ಈಗ ಹೋರಾಟ ನಡೆಸುತ್ತಿದ್ದೇವೆ. ‘ಮೈಲ್ಸ್ ಟು ಮೈ ಸ್ಕೂಲ್’ ಎಂಬ ಮಂಜೇಶ್ವರ ಮಂಡಲದ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮವು ಕಾಸರಗೋಡಿನ ಗಡಿ ಪ್ರದೇಶವಾದ ಮಂಜೇಶ್ವರದಿಂದ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿನಂತಹ ನಗರಗಳನ್ನು ಅವಲಂಬಿಸುವ ಸ್ಥಿತಿಯಿಂದ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ಶಾಸಕ ಎಂ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಕಾಸರಗೋಡು ಎ.ಎಸ್.ಪಿ. ಮುಹಮ್ಮದ್ ನದಿಮುದ್ದೀನ್ ಮುಖ್ಯ ಅತಿಥಿಗಳಾಗಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಜಿಲ್ಲಾ ಪಂಚಾಯತಿ ಸದಸ್ಯರಾದ ಜಮೀಲಾ ಸಿದ್ದೀಕ್, ಗೋಲ್ಡನ್ ರಹಮಾನ್, ಕಮಲಾಕ್ಷಿ, ನಾರಾಯಣ ನಾಯ್ಕ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಝೀನತ್ ನಸೀರ್, ಗ್ರಾಮ ಪಂಚಾಯತಿ ಸದಸ್ಯ ರಿಯಾಝ್ ಮೊಗ್ರಾಲ್, ಡಿ.ಡಿ. ಕೆ.ವಿ.ಪುμÁ್ಪ, ಡಿಇಒ ನಂದಿಕೇಶನ್, ಕುಂಬಳೆ ಎಇಒ ಯತೀಶ್ ಕುಮಾರ್ ರೈ, ಮಂಜೇಶ್ವರ ಎಇಒ ವಿ.ದಿನೇಶ್, ವಿಎಚ್‍ಎಸ್‍ಇ ಸಹಾಯಕ ನಿರ್ದೇಶಕಿ ಉದಯಕುಮಾರಿ, ಐಎಎಂ ಪ್ರಧಾನ ವ್ಯವಸ್ಥಾಪಕಿ ಅಶ್ಫೀನಾ ಅಶ್ರಫ್, ಎಸ್‍ಎಂಸಿ ಅಧ್ಯಕ್ಷ ಸೈಯದ್ ಹಾದಿ ತಂಙಳ್ ಮೊಗ್ರಾಲ್ ಮಾತನಾಡಿದರು. ಜಿವಿಎಚ್‍ಎಸ್ ಮೊಗ್ರಾಲ್ ಪಿಟಿಎ ಅಧ್ಯಕ್ಷ ಎ.ಎಂ.ಸಿದ್ದೀಕ್ ರಹಮಾನ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಕೆ.ಟಿ.ಸ್ಮಿತಾ ವಂದಿಸಿದರು.



.jpeg)
.jpeg)
