ಕಾಸರಗೋಡು: ಕುಂಬ್ಡಾಜೆ ಪಂಚಾಯಿತಿ ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಟ್ರಸ್ಟ್, ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಆಶ್ರಯದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಸಭಾ ಭವನದಲ್ಲಿ ನಡೆಯಿತು.
ಕ್ಷೇತ್ರದ ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ಣವರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಆಚಾರ ಸ್ಥಾನಿಕರು, ಆಡಳಿತ ಸಮಿತಿ ಅಧ್ಯಕ್ಷ ವಸಂತ ಚೇಂಬೋಡು, ಟ್ರಸ್ಟ್ ಅದ್ಯಕ್ಷ ಗಂಗಾಧರ ಪಳ್ಳತ್ತಡ್ಕ, ವಿವಿದ ಸಮಿತಿ ಪದಾಧಿಕಾರಿಗಳಾದ ರಾಮಮಾಸ್ಟರ್ ಇಕ್ಕೇರಿ, ಚಿರಿಯಂಡ ಬಡಕಾಜೆ, ಡಾ.ಶ್ರೀಧರ ಮಾಸ್ಟರ್, ರಾಘವ ಕನಕತ್ತೋಡಿ, ವಿಶ್ವನಾಥನ್, ರವಿ ನವಶಕ್ತಿ, ಸದಾಶಿವ ಮೈಲ್ತೊಟ್ಟಿ ಹಾಗೂ ಇತರರು ಭಾಗವಹಿಸಿದರು. ಮಂಗಳೂರಿನ ಹೃದಯ ತಜ್ಞರಾದ ಡಾ.ಕೆ.ಮುಕುಂದ್, ಡಾ.ಮೇಘನಾ ಮುಕುಂದ್, ಡಾ.ರಾಹುಲ್ ದಂಡೆಕೇರಿ ಮೊದಲಾದವರು ತಪಾಸಣೆಗೆ ನೇತೃತ್ವ ನೀಡಿದರು.
ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಹೃದಯ ತಪಾಸಣಾ ಉಚಿತ ಶಿಬಿರ
0
ಅಕ್ಟೋಬರ್ 26, 2022
Tags



.jpg)
