ಕಾಸರಗೋಡು: ಶಾಲಾ ಮಕ್ಕಳನ್ನು ಕೇಂದ್ರೀಕರಿಸಿ ನಡೆಯುವ ಮಾದಕ ವಸ್ತು ಮಾಫಿಯಾದ ಚಟುವಟಿಕೆಗಳನ್ನು ತಡೆಗಟ್ಟಲು ಎನ್‍ಸಿಸಿ, ಎಸ್‍ಪಿಸಿ, ಎನ್‍ಎಸ್‍ಎಸ್, ಸ್ಕೌಟ್ ಮತ್ತು ಗೈಡ್ಸ್, ಜೆಆರ್‍ಸಿ, ವಿಮುಕ್ತಿ ಕ್ಲಬ್‍ಗಳನ್ನು ಮತ್ತಷ್ಟು ಬಲಪಡಿಸುವಂತೆ ಜಿಲ್ಲಾ ಮಟ್ಟದ ಜನಕೀಯ ಸಮಿತಿ ಸಭೆ ನಿರ್ದೇಶಿಸಿದೆ.
ವಿದ್ಯಾರ್ಥಿಗಳಿಗೆ ಹೆಚ್ಚು ಜಾಗೃತಿ ಕಾರ್ಯಕ್ರಗಳನ್ನು ನಡೆಸಿ ಅವರನ್ನು ಮಾದಕ ವಸ್ತುಗಳನ್ನು ಎದುರಿಸುವ ರಕ್ಷಾ ಕವಚಗಳನ್ನಾಗಿ ಬದಲಾಯಿಸಬೇಕು. ಕಾನೂನು ಕ್ರಮಗಳನ್ನು ಬಿಗುಗೊಳಿಸಿದಲ್ಲಿ ಮಾತ್ರ ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ಯಶಸ್ವಿಯಾಗಲು ಸಾಧ್ಯ. ನಕಲಿ ಮದ್ಯ ಉತ್ಪಾದನೆ ಮತ್ತು ವಿತರಣೆ , ಅಕ್ರಮ ಮದ್ಯ ದಂಧೆ ತಡೆಗಟ್ಟಲು ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಜನಕೀಯ ಸಮಿತಿ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಮಾದಕ ವ್ಯಸನ ವಿರೋಧಿ ಚಟುವಟಿಕೆ ಹತ್ತಿಕ್ಕಲು ಹಳ್ಳಿಗಳಲ್ಲಿಯೂ ಕ್ರಮ ಕೈಗೊಳ್ಳಬೇಕು. ಮಾದಕ ದ್ರವ್ಯ ಸೇವಿಸುವುದು ಅಥವಾ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಸಹಾಯಕ ಅಬಕಾರಿ ಆಯುಕ್ತ ಎಸ್.ಕೃಷ್ಣಕುಮಾರ್, ಅಬಕಾರಿ ವೃತ್ತ ನಿರೀಕ್ಷಕ ಟೋನಿ ಎಸ್.ಐಸಾಕ್, ರಾಜಕೀಯ ಪ್ರತಿನಿಧಿಗಳಾದ ಮೂಸಾ.ಬಿ.ಚೆರ್ಕಳ, ಕರುಣ್ ಥಾಪ, ಎಂ.ಉಮಾ, ಕೆ.ಕುಞÂರಾಮನ್, ಕಾರ್ಮಿಕ ಸಂಘದ ಪ್ರತಿನಿಧಿಗಳಾದ ಯು.ತಂಬಾನ್, ಪಿ.ಜಿ.ದೇವ್, ಶೆರೀಫ್ ಕೊಡವಂಜಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಮಿತಿಯ ಸಂಚಾಲಕ, ಕಾಸರಗೋಡು ಉಪ ಅಬಕಾರಿ ಆಯುಕ್ತ ಡಿ ಬಾಲಚಂದ್ರನ್ ವರದಿ ಮಂಡಿಸಿದರು. ಡಿವೈಎಸ್ಪಿ ಎ. ಸತೀಶ್ ಕುಮಾರ್ ಮಾದಕವಸ್ತು ವಿರುದ್ಧ ಪೆÇಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಮಾದಕ ವಸ್ತು ವಿರೋಧಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ರಕ್ಷಾಕವಚದಂತೆ ಬದಲಾಗಬೇಕು: ಜಿಲ್ಲಾ ಮಟ್ಟದ ಜನಕೀಯ ಸಮಿತಿ ಸಭೆ
0
ಅಕ್ಟೋಬರ್ 13, 2022
Tags




