HEALTH TIPS

ಅನಂತಪುರದಲ್ಲಿ ಪುವೆಂಪು ನೆಂಪು ಸಮ್ಮಾನ್ ಪ್ರದಾನ ಹಾಗೂ ತುಳು ಲಿಪಿ ದಿನಾಚರಣೆ


         ಕುಂಬಳೆ: ತುಳುಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ(ಪು.ವೆಂ.ಪು)ರ ಜಯಂತಿ ಪ್ರಯುಕ್ತ ತುಳುವಲ್ರ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆ, ಪುವೆಂಪು ಅಭಿಮಾನಿಗಳ ಸಹಕಾರದಲ್ಲಿ "ಪುವೆಂಪು ನೆಂಪು 2022" ವಿವಿಧ ಕಾರ್ಯಕ್ರಮಗಳೊಂದಿಗೆ  ಅನಂತಪುರದಲ್ಲಿ ಜರಗಿತು.
           ಇದರ ಅಂಗವಾಗಿ ಪುವೆಂಪು ಅವರ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸರ್ವೋತ್ತಮ ಶೆಟ್ಟಿ ಅಬುಧಾಬಿ ವಹಿಸಿದ್ದರು. ಈ ಸಂದರ್ಭದಲ್ಲಿ ಚಲನಚಿತ್ರ ರಂಗದ ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ ಪುವೆಂಪು ಸಮ್ಮಾನ್ ಪ್ರದಾನಿಸಿದರು. ಸಭೆಯಲ್ಲಿ  ತುಳು ಲಿಪಿಯ ಫಲಕವನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಜಯಾನಂದ ಕುಮಾರ್ ಮಂಜೇಶ್ವರ ಅನಾವರಣಗೊಳಿಸಿದರು.



          ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್,ಶ್ರೀಕೃಷ್ಣಯ್ಯ ಅನಂತಪುರ, ವಿಜಯರಾಜ ಪುಣಿಂಚಿತ್ತಾಯ, ನ್ಯಾಯವಾದಿ ಥೋಮಸ್ ಡಿ.ಸೋಜ,  ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾ ಅಧ್ಯಕ್ಷ ಅರವಿಂದ ಅಲೆವೂರಾಯ, ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ಉದಯ ಗಟ್ಟಿ,  ತುಳುಕೂಟ ಕಾಸರಗೋಡು ಕಾರ್ಯದರ್ಶಿ ಬಿ.ಪಿ. ಶೇಣಿ, ಜೈ ತುಳುನಾಡು ಕಾಸರಗೋಡು ಅಧ್ಯಕ್ಷ ಹರಿಕಾಂತ ಕಾಸರಗೋಡು, ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಸುಂದರ ಬಾರಡ್ಕ, ಕುಶಾಲಾಕ್ಷಿ ವಿ ಕುಲಾಲ್  ಕಣ್ವತೀರ್ಥ, ಜ್ಯೋತ್ಸ್ನಾ ಕಡೆಂದೇಲು, ರವೀಂದ್ರನ್ ಪಾಡಿ, ಶಾಂತಾರಾಮ ವಿ ಶೆಟ್ಟಿ, ವಾಣಿ ಪಿ.ಯಸ್  ನೀರ್ಚಾಲ್, ಡಾ. ರಾಜೇಶ್ ಭಟ್ ಮಂದಾರ, ಸೀತಾರಾಮ ಕುಂಜತ್ತಾಯ,  ಶ್ರೀನಿವಾಸ ಆಳ್ವ ಕಳತ್ತೂರು ಮೊದಲಾವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪುವೆಂಪುರವರ ರಚನೆಯ ಹಾಡುಗಳನ್ನು ಪ್ರಭಾವತಿ ಕೆದಿಲಾಯ ಪುಂಡೂರು, ಜಯಶ್ರೀ ಅನಂತಪುರ ಹಾಡಿದರು. ತುಳುವಲ್ಡ್ ನ ನಿರ್ದೇಶಕ ಡಾ.ರಾಜೇಶ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎ.ಶ್ರೀನಾಥ್ ಕಾಸರಗೋಡು ಸ್ವಾಗತಿಸಿ, ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಕಾಸರಗೋಡು ವಂದಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries