ಮಂಜೇಶ್ವರ: ವರ್ಕಾಡಿ ವಾಸುಕಿ ನಾಗದೇವರ ಹಾಗೂ ಪರಿವಾರ ದೈವಗಳ ಕ್ಷೇತ್ರ ತಚ್ಚಿರೆ ಪದವು ಪಾವೂರು ಇದರ ಜೀರ್ಣೋದ್ಧಾರ ಕಾರ್ಯವು ಬರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಕ್ಷೇತ್ರ ಧರ್ಮಸ್ಥಳದ ನ್ಯಾಯ ತೀರ್ಮಾನ ಮಾಡುವ ಮುಖ್ಯಸ್ಥ ಭಾಸ್ಕರ್ ಶಾಸ್ತ್ರಿ ದೇಲಂಪಾಡಿತ್ತಾಯರು ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರು. ಬಳಿಕ ನಡೆದ ಸರಳ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಯುವಕರು ಮುತುವರ್ಜಿ ವಹಿಸಿ ಕರಸೇವೆ ರೂಪದಲ್ಲಿ ಕೆಲಸ ಮಾಡಿದರೆ ತಮಗೆ ಬರುತ್ತಿರುವ ಕಷ್ಟ-ನಷ್ಟ ದೋಷಗಳಿಂದ ದೂರಾಗಿ ಸುಖದ ಜೀವನ ಲಭಿಸಬಹುದು. ಅಲ್ಲದೆ ಊರಿನವರ ಆರ್ಥಿಕ ಸಹಕಾರವನ್ನು ಪಡೆಯುವುದರೊಂದಿಗೆ ಪರ ಊರಿನ ಭಕ್ತಾಭಿಮಾನಿಗಳ ಹೆಚ್ಚಿನ ಸಹಕಾರವನ್ನು ಪಡೆಯಲು ಶ್ರಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಂತ್ರಿವರ್ಯ ರಾಜೇಶ್ ತಾಳಿತ್ತಾಯ ವರ್ಕಾಡಿ, ಶಿಲ್ಪಿ ಪಾರ್ಥಸಾರಥಿ, ಹಿರಿಯರಾದ ಐತ್ತಪ್ಪ ಆಚಾರ್ಯ, ಕೃಷ್ಣ ಶೆಟ್ಟಿ ಪಾವಳಗುತ್ತು, ಚಂದ್ರಹಾಸ ಪೂಜಾರಿ ಮುಡಿಮಾರ್, ಕೆಜಿಬಿ ಬ್ಯಾಂಕಿನ ನಿವೃತ್ತ ಶಾಖಾಧಿಕಾರಿ ದೇವದಾಸ್, ಮಾಧ್ಯಮ ಮಾಲಕ ಶಶಿಧರ ಪೊಯ್ಯತ್ತಬೈಲ್, ಆಡಳಿತ ಸಮಿತಿ ಗೌರವಧ್ಯಕ್ಷ ಆನಂದ ಟಿ, ಅಧ್ಯಕ್ಷ ರಮೇಶ ಶೆಟ್ಟಿಗಾರ್, ಉಪಾಧ್ಯಕ್ಷ ಚಂದ್ರಹಾಸ ಬಡಾಜೆ, ಕೋಶಾಧಿಕಾರಿ ಶೇಖರ್ ಟಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಲ್ಲೆಂಗಿ ಪದವು, ಜೊತೆ ಕಾರ್ಯದರ್ಶಿ ಶಾರದಾ ರಾವ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಾಜೇಶ್ ಮದಕ, ಕಾರ್ಯದರ್ಶಿ ಕಿಶೋರ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ಮಾಡ, ಉಪಾಧ್ಯಕ್ಷ ರವಿ ಮುಡಿಮಾರ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕ ಕೃಷ್ಣ ಸಾಲಿಯನ್ ಬೆಳ್ತಂಗಡಿ, ಪುರೋಹಿತ ಶ್ರೀನಿಧಿ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನಂದ ಟಿ ಸ್ವಾಗತಿಸಿ, ಶಾರದ ರಾವ್ ವಂದಿಸಿದರು.




.jpg)
.jpg)
.jpg)
