HEALTH TIPS

ಅಂತಾರಾಷ್ಟ್ರೀಯ ಉತ್ಸವ'ಬೇಕಲ್ ಫೆಸ್ಟ್'ಗೆ ಸಜ್ಜುಕೊಳ್ಳುತ್ತಿರುವ ಬೇಕಲ ಕೋಟೆ: ಹತ್ತು ದಿವಸಗಳ ಕಾಲ ನಡೆಯಲಿದೆ ಸಾಂಸ್ಕøತಿಕ ಕಲಾಮೇಳ



                  ಕಾಸರಗೋಡು: ಬೇಕಲ ಅಂತರಾಷ್ಟ್ರೀಯ ಉತ್ಸವ(ಬೇಕಲ್ ಫೆಸ್ಟ್)ಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, 10 ದಿನಗಳ ಸಾಂಸ್ಕøತಿಕ ಉತ್ಸವಕ್ಕೆ ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ತಯಾರಿಸಲಾಗುತ್ತಿದೆ.  ಬೇಕಲ್ ಫೆಸ್ಟ್ ಡಿ. 24ಕ್ಕೆ ಆರಂಭಗೊಂಡು, ಜ. 2ರ ವರೆಗೆ ನಡೆಯಲಿದ್ದು, ಐತಿಹಾಸಿಕ ಕಾರ್ಯಕ್ರಮವನ್ನಾಗಿಸಲು ಉತ್ಸವ ಸಮಿತಿ ಕಾರ್ಯೋನ್ಮುಖವಾಗಿದೆ.
           ಹತ್ತು ದಿವಸಗಳ ಕಾಲ ನಡೆಯಲಿರುವ ಸಾಂಸ್ಕøತಿಕ ಉತ್ಸವವನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡುವುದರ ಜತೆಗೆ ಹೊಸ ವರ್ಷದ ಮೊದಲ ದಿನವನ್ನು ವರ್ಣರಂಜಿತವಾಗಿ ಸ್ವಾಗತಿಸಲಾಗುವುದು. ದೇಶ, ವಿದೇಶಗಳ ಹೆಸರಾಂತ ಕಲಾವಿದರ ನೇತೃತ್ವದ ವಿವಿಧ ಕಲಾ ತಂಡಗಳು ಉತ್ಸವನಗರಿ ಬೇಕಲಕ್ಕೆ ಆಗಮಿಸಲಿದೆ. ಬೇಕಲ ಕರಾವಳಿಯಲ್ಲಿ ಬೇಕಲ್ ರೆಸಾರ್ಟ್ ಡೆವೆಲಪ್‍ಮೆಂಟ್ ಕಾರ್ಪೋರೇಶನ್(ಬಿಆರ್‍ಡಿಸಿ)ನ ಸುಮಾರು 30 ಎಕರೆ ಜಾಗದಲ್ಲಿ ಉತ್ಸವನಗರಿ ತಲೆಯೆತ್ತಲಿದೆ. ಹೊಸ ವರ್ಷದ ದಿನವನ್ನು ವರ್ಣರಂಜಿತ ಹಾಗೂ ಅವಿಸ್ಮರಣೀಯಗೊಳಿಸುವ ಉದ್ದೇಶದಿಂದ ವಿಶಿಷ್ಟ ತಂತ್ರಜ್ಞಾನದೊಂದಿಗೆ ಇಲ್ಲಿ ವೇದಿಕೆ ಹಾಗೂ ಬೆಳಕಿನ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ.  ಸಾರ್ವಜನಿಕ ವಲಯದ ವಿವಿಧ ಸಂಸ್ಥೆಗಳ ಪೆವಿಲಿಯನ್‍ಗಳು, ವಾಣಿಜ್ಯ ಮಳಿಗೆಗಳು, ಆಕರ್ಷಕ ವಿದ್ಯುತ್ ಕಂದೀಲುಗಳು ಉತ್ಸವನಗರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.
             ಪಳ್ಳಿಕ್ಕರ ಗ್ರಾ.ಪಂ.ವ್ಯಾಪ್ತಿಯ ಬೇಕಲ ಎಂಬ ಪ್ರದೇಶವನ್ನು ವಿಶ್ವದ ಗಮನಸೆಳೆಯುವಂತೆ ಮಾಡಿರುವ ಐತಿಹಾಸಿಕ ಬೇಕಲ ಕೋಟೆಯ ಉತ್ಸವದ ದಿನಗಳಲ್ಲಿ ಕೋಟೆಯ ಉಸ್ತುವಾರಿ ಹೊತ್ತಿರುವ ಭಾರತೀಯ ಪುರಾತತ್ವ ಇಲಾಖೆ (ಎಎಸ್‍ಐ)ಕೋಟೆಯನ್ನು ವಿದ್ಯುತ್‍ಬೆಳಕಿನ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಿದೆ.
          ಬೇಕಲ ಉದ್ಯಾನವನದ ವಿಶಾಲವಾದ ಹುಲ್ಲುಹಾಸಿನಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ 10 ದಿನಗಳ ಕಾಲ ಖ್ಯಾತ ಕಲಾವಿದರಿಂದ ಕಲಾ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಡು, ನೃತ್ಯ, ಧ್ವನಿ, ಬೆಳಕು ಮತ್ತು ವೈವಿಧ್ಯಮಯ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲಿದೆ. ಉಪ ವೇದಿಕೆಗಳಲ್ಲಿ ನಾಟಕಗಳು ಮತ್ತು ಕೇರಳದ ವಿಶಿಷ್ಟ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುವುದು.
                              ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ:
                ಡಿಸೆಂಬರ್ 31ರ ಮಧ್ಯರಾತ್ರಿ ಹೊಸ ವರ್ಷವನ್ನು ಆಕರ್ಷಕ ಸುಡುಮದ್ದು ಪ್ರದರ್ಶನದ ಜತೆಗೆ ವಿಶೇಷ ಕಲಾ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ. ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು, ತ್ರಿಸ್ತರ ಪಂಚಾಯಿತಿ ಆಡಳಿತ ಮಂಡಳಿಗಳು, ಕುಟುಂಬಶ್ರೀ, ಸರ್ಕಾರ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಘಗಳ ನೇತೃತ್ವದಲ್ಲಿ ಬೇಕಲ್ ಫೆಸ್ಟ್ ನಡೆಯಲಿದ್ದು, ಉತ್ಸವದ ನಿರ್ವಹಣೆ ಮತ್ತು ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ಕಾಸರಗೋಡಿನಲ್ಲಿ ಇತ್ತೀಚೆಗೆ ಬೇಕಲ್ ಫೆಸ್ಟ್‍ನ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. ಖ್ಯಾತ ಚಿತ್ರಕಲಾವಿದ ಬ್ಯಾರೆ ಭಾಸ್ಕರನ್ ಅವರು ಲೋಗೋವನ್ನು ವಿನ್ಯಾಸಗೊಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries