ಕಾಸರಗೋಡು: ಜಿಲ್ಲೆಯಲ್ಲಿ ಗ್ರಾಮಾಧಿಕಾರಿ ಕಚೇರಿ ಹಾಗೂ ªಗ್ರಾಮಗಳ ವಿವಿಧ ಮನೆಗಳಿಗೆ ಹಮ್ಮಿಕೊಂಡಿರುವ ಭೇಟಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಕಾಸರಗೋಡು ತಾಲೂಕಿನ ಕಾಸರಗೋಡು ಮತ್ತು ತಳಂಗರೆ ಗ್ರಾಮ ಕಚೇರಿಗಳಿಗೆ ಭೇಟಿ ನೀಡಿ, ಕಚೇರಿಯಲ್ಲಿನ ಕುಂದುಕೊರತೆಗಳು, ಗ್ರಾಮವಾಸಿಗಳಿಗೆ ಸಕಾಲಕ್ಕೆ ಸೇವೆಗಳು ಲಭಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು.
ಗ್ರಾಮ ಕಚೇರಿಗಳ ಜತೆಗೆ ಆಯಾ ಪ್ರದೇಶಗಳಲ್ಲಿನ ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಗ್ರಾಮ ಕಚೇರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಕಾಸರಗೋಡು ಗ್ರಾಮ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿ ನೆರೆದಿದ್ದ ಸಾರ್ವಜನಿಕರಿಂದ ದೂರು ಸ್ವೀಕರಿಸಿದರು. ಮೀನುಗಾರ ಕುಟುಂಬಗಳಲ್ಲಿ ಮನೆ ಮತ್ತು ಜಮೀನಿನ ಕೊರತೆಯ ಬಗ್ಗೆ ಬಹುತೇಕ ದೂರುಗಳಿದ್ದುವು. ದೂರುಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಗ್ರಾಮ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ ನಂತರ ತಳಂಗರೆ ಗ್ರಾಮ ಕಚೇರಿಗೆ ಭೇಟಿ ನೀಡಿದರು. ಕೊಪ್ಪಳಂ ನಿವಾಸಿಯೊಬ್ಬರ ಮನೆ ಕರಾವಳಿ ನಿರ್ವಹಣಾ ಕಾಯ್ದೆ ವ್ಯಾಪ್ತಿಗೆ ಬರುವುದರಿಂದ ಅದನ್ನು ನವೀಕರಿಸಲು ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಈ ಬಗೆಗಿನ ದೂರುಗಳ ವಿಚಾರಣೆ ನಡೆಸಿದರು.
ಗ್ರಾಮವಾಸಿಗಳ ದೂರು ದುಮ್ಮಾನಗಳಿಗೆ ಕಿವಿಯಾದ ಜಿಲ್ಲಾಧಿಕಾರಿ
0
ಅಕ್ಟೋಬರ್ 14, 2022
Tags


