ಕಾಸರಗೋಡು: ಕೇರಳದ ವಿಶಿಷ್ಟ ಸಮರ ಕಲೆಯಾದ ಕಳರಿ ಬಗ್ಗೆ ಅಭ್ಯಾಸ ನಡೆಸಲು ಜಿಲ್ಲೆಯ ಪ.ವರ್ಗ ಜನಾಂಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪರಿಶಿಷ್ಟ ಪಂಗಡದ ಜನರಲ್ಲಿ ಕಲರಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಕಲರಿಯನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಲು ಅವಕಾಶವನ್ನು ಒದಗಿಸುತ್ತದೆ.
ಜಿಲ್ಲೆಯ ಪರಿಶಿಷ್ಟ ಪಂಗಡದ ಜನರಿಗೆ ಕಲರಿಪಯಟ್ ಸಮರ ಕಲೆಯನ್ನು ಸಾರ್ವತ್ರಿಕಗೊಳಿಸುವ ಉದ್ದೇಶದಿಂದ ಕುಟುಂಬಶ್ರೀ ಜಿಲ್ಲಾ ಮಿಷನ್ ಟ್ರೈಬಲ್ ಈ ಕಲರಿ ಅಕಾಡೆಮಿಯನ್ನು ಪ್ರಾರಂಬಿಸಿದೆ.
ಕುಟುಂಬಶ್ರೀ ಟ್ರೈಬಲ್ ಕಲರಿ ಅಕಾಡೆಮಿಯು ಪರಿಶಿಷ್ಟ ಪಂಗಡದ ಸುಸ್ಥಿರ ಅಭಿವೃದ್ಧಿ ಯೋಜನೆ ಮತ್ತು ಜಿಲ್ಲಾ ವಿಶಿಷ್ಟ ಕಾರ್ಯಕ್ರಮಗಳ ಅಂಗಗವಾಗಿ ಬುಡಕಟ್ಟು ಬಾಲ ಸಭಾ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಪ್ಪ ಸಿಡಿಎಸ್‍ಗಳಿಂದ ಆಯ್ಕೆಯಾದ 20 ಮಕ್ಕಳಿಗೆ ತರಬೇತಿ ನೀಡಲಾಗುವುದು. ಬಾಲಕರು ಮತ್ತು ಬಾಲಕಿಯರಿಗಾಗಿ ತರಬೇತಿ ಆಯೋಜಿಸಲಾಗುತ್ತಿದೆ. ಆತ್ಮರಕ್ಷಣೆ ಜತೆಗೆ ಪ್ರತಿರೋಧ ತರಬೇತಿಯನ್ನು ಕಳರಿ ಒಳಗೊಂಡಿರುತ್ತದೆ. ನೈತಿಕತೆ, ಉತ್ತಮ ಚಾರಿತ್ರ್ಯ, ನ್ಯಾಯ ಪ್ರಜ್ಞೆ, ಧೈರ್ಯ ಮತ್ತು ಗುರು ಭಕ್ತಿಯಂತಹ ಗುಣಗಳನ್ನು ಸಂಯೋಜಿಸುವ ತರಬೇತಿಯ ವಿಧಾನವನ್ನು ಸಹ ಅಳವಡಿಸಲಾಗಿದೆ. ಮಕ್ಕಳು ವಾರದಲ್ಲಿ 5 ದಿನ ಶಾಲೆಯಲ್ಲಿ ಮತ್ತು 2 ದಿನ ಕುಟುಂಬಶ್ರೀಯ ಕಳರಿ ಅಕಾಡೆಮಿಯಲ್ಲಿ ಅಭ್ಯಾಸ ನಿರತರಾಗಲಿದ್ದಾರೆ.
ಕುಟುಂಬಶ್ರೀ ಮುನ್ನಡೆಸುವ ಸಂಸ್ಥೆಯಾದ ಆಂಜನೇಯ ಕಳರಿ ತರಬೇತಿ ಕೇಂದ್ರದಲ್ಲಿ ಒಂದು ವರ್ಷ ಕಲರಿ ತರಬೇತಿ ನಡೆಯಲಿದೆ. ಸಾಂಪ್ರದಾಯಿಕ ಗೋತ್ರ ಚಿಕಿತ್ಸೆ ಮತ್ತು ಕಳರಿ ಸಮರಕಲೆ ಎರಡನ್ನೂ ಸಮಾನವಾಗಿ ಅಭ್ಯಾಸ ಮಾಡಿಕೊಮಡಿರುವ ಸಾಂಪ್ರದಾಯಿಕ ವೈದ್ಯ ಮಣಿಕಂಠನ್ ಗುರುಗಳು ಕಳರಿ ಅಭ್ಯಾಸ ನಡೆಸಿಕೊಡಲಿದ್ದಾರೆ. ತರಬೇತಿ ಪಡೆದವರು 10 ರಿಂದ 18 ವರ್ಷದೊಳಗಿನ 12 ಮಂದಿ ಬಾಲಕಿಯರು ಮತ್ತು 8 ಬಾಲಕರು ಒಳಗೊಂಡಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ 3 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ.
ಪರಿಶಿಷ್ಟ ಪಂಗಡದ ಜನರಿಗಾಗಿ ಕಲರಿಪಯಟ್ ಸಮರ ಕಲೆ ತರಬೇತಿ
0
ಅಕ್ಟೋಬರ್ 14, 2022
Tags


