ಕಾಸರಗೋಡು: ಆಲ್ ಕೇರಳ ಮಾರ್ಬಲ್ಸ್ ಮತ್ತು ಟೈಲ್ಸ್ ವರ್ಕರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾರ್ಮಿಕರ ಕುಟುಂಬ ಸಂಗಮ ಮತ್ತು ಮಾದಕ ವಸ್ತು ವಿರೋಧಿ ವಿಚಾರ ಸಂಕಿರಣ ಅ. 16ರಂದು ನೀಲೇಶ್ವರಂನ ಕೊಟ್ಟಪುರಂನ ಶ್ರೀ ವೈಕುಂಠಂ ಕ್ಷೇತಾ ಆಡಿಟೋರಿಯಂನಲ್ಲಿ ಜರುಗಲಿರುವುದಗಿ ಸಂಘಟನೆ ಜಿಲ್ಲಾಧ್ಯಕ್ಷ ಕುಞÂರಾಮನ್ ಪಟ್ಟಿಕೊಚ್ಚಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10ಕ್ಕೆ ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ಐಪಿಎಸ್ ಉದ್ಘಾಟಿಸುವರು. ಸಂಘಟನೆ ಜಿಲ್ಲಾಧ್ಯಕ್ಷ ಕುಞÂರಾಮನ್ ಪಟ್ಟಿಕೊಚ್ಚಿ ರ್ಅಯಕ್ಷತೆ ವಹಿಸುವರು. ಸಿನಿಮಾ ನಾಟಕಗಳಿಂದ ಪ್ರಸಿದ್ಧರಾದ ಪಿ.ಸಿ ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಕಾರ್ಯಾಧ್ಯಕ್ಷ ಸುಧನ್ ಮಟ್ಟನ್ನೂರು ಹಾಗೂ ರಾಜ್ಯ ಕಾರ್ಯದರ್ಶಿ ಅನಿಲ್ ಮಲೆಯಿನ್‍ಕಿಯಿ ಉಪಸ್ಥಿತರಿರುವರು. ಈ ಸಂದರ್ಭ ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ಅನ್ವಯ ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥ್ ಅವರಿಂದ ತರಗತಿ ನಡೆಯುವುದು.
ಅಧ್ಯಕ್ಷ ಬಾಬು ಮಡಿಕೈ ಉಪಸ್ಥಿತಿಯಲ್ಲಿ ರಾಜ್ಯ ಉಪಾಧ್ಯಕ್ಷ ಹಂಸ ಮನ್ನಾರ್ಕಾಡ್, ಕಾರ್ಮಿಕ ಮತ್ತು ಜೀವ ಸುರಕ್ಷಾ ನಿಧಿ ವಿಷಯದ ಮೇಲೆ ತರಗತಿ ನಡೆಸಲಿದ್ದಾರೆ. ನೆಲಹಾಸು ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಅಭ್ಯುದಯ ಹಾಗೂ ಕಾರ್ಮಿಕರ ಕುಟುಂಬಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜೀವನ್ ಸುರಕ್ಷಾ ನಿಧಿ ಯೋಜನೆ ಆರಂಭಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಪರಧಾನ ಕಾರ್ಯದರ್ಶಿ ಮನೇಶ್ ಪಿ.ವಿ, ಕಾರ್ಯಾಧ್ಯಕ್ಷ ಕುಞÂಕೃಷ್ಣನ್ ತ್ರಿಕರಿಪುರ, ಜಿಲ್ಲಾ ಕಾರ್ಯದರ್ಶಿ ಉಣ್ಣಿ ಮಾಧವಂ ಮತ್ತು ಶಶಿ ಪರವನಡ್ಕ ಉಪಸ್ಥಿತರಿದ್ದರು.
ಆಲ್ ಕೇರಳ ಮಾರ್ಬಲ್ಸ್ ಮತ್ತು ಟೈಲ್ಸ್ ವರ್ಕರ್ಸ್ ಅಸೋಸಿಯೇಶನ್ ಕುಟುಂಬ ಸಂಗಮ, ಮಾದಕ ವಸ್ತು ವಿರೋಧಿ ವಿಚಾರ ಸಂಕಿರಣ
0
ಅಕ್ಟೋಬರ್ 14, 2022
Tags

