ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ದಸರಾನಾಡಹಬ್ಬ ಸಂಭ್ರಮಾಚರಣೆಸರಗೋಡು: ನಗರದ ಜನರಲ್ ಆಸ್ಪತ್ರೆಯ ಸಿಬ್ಬಂದಿಯಿಂದ ದಸರಾ ನಾಡ ಹಬ್ಬವನ್ನು ಆಚರಿಸಲಾಯಿತು. ಕನ್ನಡ ಬಳಗ ಮತ್ತು ಆಸ್ಪತ್ರೆ ಸ್ಟಾಫ್ ಕೌನ್ಸಿಲ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಸ್ಪತ್ರೆಯ ಅಧೀಕ್ಷಕ ಡಾ.ರಾಜಾರಾಂ ಕೆ.ಕೆ. ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ವೆಂಕಟಗಿರಿ ದಸರಾ ಇತಿಹಾಸ ಮತ್ತು ಸಂದೇಶ ತಿಳಿಸಿದರು. ಡಾ.ಜನಾರ್ದನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್ ಎ, ಡಾ.ಬಿ.ನಾರಾಯಣ ನಾಯ್ಕ್, ಡಾ.ಕೃಷ್ಣನಾಯ್ಕ್ ಪಿ, ನಸಿರ್ಂಗ್ ಅಧೀಕ್ಷಕಿ ಮೇರಿ ಎಜೆ, ಕಾರ್ಯದರ್ಶಿ ಬಾಲಸುಬ್ರಮಣ್ಯಭಟ್ ಉಪಸ್ಥಿತರಿದ್ದರು. ಧನರಾಜ್ ಸ್ವಾಗತಿಸಿದರು. ವೆಂಕಟರಮಣ ಭಟ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಗಾಯನ, ನೃತ್ಯ, ಕರ್ನಾಟಕ ಶೈಲಿಯ ಆಹಾರ ಸೇರಿದಂತೆ ಕನ್ನಡ ಕಲಾ ಕಾರ್ಯಕ್ರಮಗಳು ನಡೆಯಿತು.
ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2022
Tags


