ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಎಸ್ ನೇತೃತ್ವದಲ್ಲಿ ಭತ್ತದ ಪೈರಿನ ಕಟಾವನ್ನು ಕೊಯ್ಲು ಉತ್ಸವವಗಿ ಆಚರಿಸಲಾಯಿತು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಕೊಯ್ಲು ಉತ್ಸವ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯಾ ಅಧ್ಯಕ್ಷತೆ ವಹಿಸಿದ್ದರು. ಎರಡು ಎಕರೆ ವಿಸ್ತೀರ್ಣದ ವೇಲಾಯಿ ಗದ್ದೆಯಲ್ಲಿ ನಡೆದ ಸುಗ್ಗಿ ಹಬ್ಬದಲ್ಲಿ 17 ವಾರ್ಡ್ ಗಳ 110 ಮಂದಿ ಕೊಯ್ಲು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಗೋಪಿ, ಪಿ.ವಸಂತಕುಮಾರಿ, ಟಿ. ವರದರಾಜ್, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ವಾರ್ಡ್ ಸದಸ್ಯರಾದ ಕೆ.ಪ್ರಿಯಾ, ಶಾಂತ ಕುಮಾರಿ, ಎಂ. ತಂಬಾನ್, ಕೆ.ರಘುನಾಥನ್, ಯೋಜನಾ ಸಮಿತಿ ಸದಸ್ಯ ಎಂ.ಅನಂತನ್ ಮತ್ತಿತರರು ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಎಂ.ಗುಲಾಬಿ ಸ್ವಾಗತಿಸಿದರು. ಸಿಡಿಎಸ್ ಸದಸ್ಯೆ ಕೆ.ಸಾವಿತ್ರಿ ವಂದಿಸಿದರು.
ಬೇಡಡ್ಕ ಗ್ರಾಮ ಪಂಚಾಯಿತಿ ಸಿಡಿಎಸ್ ವತಿಯಿಂದ ಕೊಯ್ಲು ಉತ್ಸವ
0
ಅಕ್ಟೋಬರ್ 14, 2022
Tags





