ಕಾಸರಗೋಡು: ಕೇರಳ ಪ್ರವೇಶಿಸುವ ಇತರ ರಾಜ್ಯಗಳ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ ಅವುಗಳಿಗೆ ತೆರಿಗೆ ವಿಧಿಸುವುದು ಸೇರಿದಂತೆ ವಿವಿಧ ಕ್ರಮಕ್ಕೆ ಮೋಟಾರು ವಾಹನ ಇಲಾಖೆ ಮುಂದಾಗಲಿದೆ ಎಂದು ಸಾರಿಗೆ ಸಚಿವ ಆಂಟನಿರಾಜು ತಿಳಿಸಿದ್ದಾರೆ.
ಅವರು ಶುಕ್ರವಾರ ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್‍ನಲ್ಲಿ ಮೋಟಾರು ವಾಹನ ಇಲಾಖೆ ವತಿಯಿಂದ ಆಯೋಜಿಸಲಾದ ಮೋಟಾರು ವಾಹನ ಅದಾಲತ್'ವಾಹನೀಯಂ'ಗೆಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ತಮಿಳುನಾಡು ಮಾದರಿಯಲ್ಲಿ ಇತರ ರಾಜ್ಯಗಳ ವಾಹನಗಳು ಕೇರಳ ಪ್ರವೇಶಿಸಿದಾಗಲೂ ತೆರಿಗೆ ವಿಧಿಸಲಾಗುವುದು. ತೆರಿಗೆ ಕಡಿಮೆ ಇರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸಿ ಇಲ್ಲಿ ಸಂಚಾರ ನಡೆಸುವ ಕೇರಳೀಯರಿದ್ದಾರೆ. ಇಂತಹ ವಾಹನಗಳನ್ನು ಪತ್ತೆಹಚ್ಚಿ, ಇವುಗಳಿಗೆ ಕೇರಳದ ತೆರಿಗೆ ಪಾವತಿಸುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರ್‍ಟಿಓಗಳಲ್ಲಿ ಸಏವೆ ಲಭ್ಯ:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರ್‍ಟಿಒ ಸೇವೆಗಳು ಚೆಕ್‍ಪೋಸ್ಟ್‍ಗಳ ಮೂಲಕ ಲಭ್ಯವಾಗಲಿದೆ. ವಾಹನಗಳ ಮಾಲೀಕರಿಗೆ ಇತರ ರಾಜ್ಯಗಳಿಗೆ ಮತ್ತು ಹೊರಹೋಗುವ ವಾಹನಗಳಿಗೆ ತೆರಿಗೆಗಳು, ಪರವಾನಗಿಗಳು ಮತ್ತು ಪರವಾನಗಿಗಳ ವಿಸ್ತರಣೆ ಮತ್ತು ವಿಶೇಷ ಪರವಾನಿಗೆ ಈಗ ಕಡಿಮೆ ಅವಧಿಯಲ್ಲಿ ಚೆಕ್ ಪೆÇೀಸ್ಟ್‍ನಿಂದ ಸುಲಭವಾಗಿ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಎಂ.ರಾಜಗೋಪಾಲನ್, ಹೆಚ್ಚುವರಿ ಸಾರಿಗೆ ಆಯುಕ್ತ ಪಿ.ಎಸ್.ಪ್ರಮೋಜ್ ಶಂಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾ ಸದಸ್ಯೆ ವಿಮಲಾ ಶ್ರೀಧರ್ ಉಪಸ್ಥಿತರಿದ್ದರು.
160 ದೂರುಗಳಿಗೆ ತೀರ್ಪು:
ಸಾರಿಗೆ ಸಚಿವ ಆಂಟನಿ ರಾಜು ನೇತೃತ್ವದಲ್ಲಿ ಮುನ್ಸಿಪಲ್ ಟೌನ್‍ಹಾಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಮೋಟಾರು ವಆಹನ ಅದಾಲತ್'ವಾಹನೀಯಂ"ನಲ್ಲಿ 203 ದೂರುಗಳನ್ನು ಪರಿಗಣಿಸಲಾಗಿದ್ದು, ಇವುಗಳಲ್ಲಿ 160 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ವಾಹನಗಳ ಆರ್‍ಸಿಗೆ ಸಂಬಂಧಿಸಿದಂತೆ 70ಮ ಪರವಾನಗಿ ಸಂಬಂಧಿಸಿ 60 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದವುಗಳು ತೆರಿಗೆ ಪಾವತಿ, ಪರವಾನಗಿ ಮತ್ತು ವಾಹನಗಳ ಸ್ಕ್ರ್ಯಾಪ್‍ಗೆ ಸಂಬಂಧಿಸಿದವುಗಳಾಗಿವೆ.
ಸಾರಿಗೆ ಸಚಿವರಿಂದ 'ವಾಹನೀಯಂ'ಅದಾಲತ್: 160 ದೂರುಗಳಿಗೆ ತೀರ್ಪು: ಹೊರ ರಾಜ್ಯ ನೋಂದಣಿ ಹೊಂದಿರುವ ವಾಹನಗಳಿಗೆ ತೆರಿಗೆಗೆ ಚಿಂತನೆ
0
ಅಕ್ಟೋಬರ್ 14, 2022
Tags





