HEALTH TIPS

ಮಂಜೇಶ್ವರದಲ್ಲಿ ಮೂರು ವರ್ಷಗಳ ಎಲ್‍ಎಲ್‍ಬಿಗೆ ಅರ್ಜಿ ಆಹ್ವಾನ


           ಮಂಜೇಶ್ವರ: ಕಣ್ಣೂರು ವಿಶ್ವವಿದ್ಯಾನಿಲಯದ ಮಂಜೇಶ್ವರ ಕ್ಯಾಂಪಸ್‍ನ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್‍ನಲ್ಲಿ ಹೊಸದಾಗಿ ಪ್ರಾರಂಭವಾದ 2022-23 ಶೈಕ್ಷಣಿಕ ವರ್ಷದ ಹೊಸದಾಗಿ ಆರಂಭಿಸುವ ಎಲ್‍ಎಲ್‍ಬಿ  ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಒಟ್ಟು 60 ಸೀಟುಗಳಿವೆ.  ಕಣ್ಣೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಯಾವುದೇ ವಿಷಯದಲ್ಲಿ  ಶೇಕಡಾ 45 ಕ್ಕಿಂತ ಹೆಚ್ಚು ಅಂಕಗಳೊಂದಿಗೆ (ಎಸ್‍ಸಿ, ಎಸ್‍ಟಿ-40 ಶೇಕಡಾ) ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ವಿಶ್ವವಿದ್ಯಾನಿಲಯವು ನಡೆಸುವ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿಯ ಆಧಾರದಲ್ಲಿ ಪ್ರವೇಶ ಲಭಿಸುವುದು. ಅರ್ಜಿದಾರರು ಕಣ್ಣೂರು ವಿಶ್ವವಿದ್ಯಾಲಯದ ವೆಬ್‍ಸೈಟ್

www.admission.kannuruniversity.ac.in   ನಲ್ಲಿ ಆನ್‍ಲೈನ್ ಆಗಿ ನೋಂದಾಯಿಸಿಕೊಳ್ಳಬೇಕು.  ಅಕ್ಟೋಬರ್ 25 ರಂದು ಸಂಜೆ 5 ಕ್ಕೆ ನೋಂದಣಿ ಮುಕ್ತಾಯವಾಗುತ್ತದೆ.  ಆನ್‍ಲೈನ್ ನೋಂದಣಿ ಶುಲ್ಕ ಎಸ್‍ಸಿ ಮತ್ತು ಎಸ್‍ಟಿ ವಿಭಾಗ ಗಳಿಗೆ ರೂ. 150.  ಇತರರಿಗೆ 450 ರೂ. ಎಸ್‍ಬಿಐ, ಇ-ಪೇ  ಮೂಲಕ ಆನ್‍ಲೈನ್‍ನಲ್ಲಿ ಶುಲ್ಕವನ್ನು ಕಟ್ಟಬೇಕು.  ಡಿಡಿ, ಚೆಕ್, ಚಲನ್ ಇತ್ಯಾದಿಗಳನ್ನು ಸ್ವೀಕರಿಸಲಾಗುವುದಿಲ್ಲ.  ಆನ್‍ಲೈನ್‍ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್ ಔಟ್ ಮತ್ತು ಆನ್‍ಲೈನ್ ಪಾವತಿ ಪ್ರಿಂಟ್ ಔಟ್ ನ್ನು ಪ್ರವೇಶದ ಸಮಯದಲ್ಲಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಬೇಕು.  ವೈಟೇಜ್ / ಮೀಸಲಾತಿ ವಿಭಾಗದ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಆನ್‍ಲೈನ್ ನೋಂದಣಿಯ ಅರ್ಜಿ ನಮೂನೆಯಲ್ಲಿ ಸ್ಪಷ್ಟವಾಗಿ ವಿವರಗಳನ್ನು ನಮೂದಿಸಬೇಕು. ಹೆಚ್ಚಿನ ವಿವರಗಳು

www.admission.kannuruniversity.ac.in  ಎಂಬ ವೆಬ್ಸೈಟ್ ನಿಂದ ಲಭಿಸುವುದು.ಮಾಹಿತಿಗೆ ದೂರವಾಣಿ 04972715284, 2715261, 7356948230. ಇಮೇಲ್

deptsws@kannuruniv.ac.in  ಗೆ ಸಲ್ಲಿಸಬಹುದು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries