ಮುಳ್ಳೇರಿಯ: ಕಾರಡ್ಕ ಬ್ಲಾಕ್ ಕ್ಷೀರ ಅಭಿವೃದ್ಧಿ ಘಟಕ ಮತ್ತು ಬ್ಲಾಕ್ ಕ್ಷೀರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬ್ಲಾಕ್ ಮಟ್ಟದ ಹೈನುಗಾರರ ಸಮಾವೇಶವು ಅಕ್ಟೋಬರ್ 14 ರಂದು ಶುಕ್ರವಾರ ಕರ್ಮಂತೋಡಿ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.
ಶಾಸಕ ಎನ್ ಎ ನೆಲ್ಲಿಕ್ಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸುವರು. ಜಾನುವಾರು ಪ್ರದರ್ಶನ, ಹೈನುಗಾರರನ್ನು ಗೌರವಿಸುವುದು, ಹೈನುಗಾರಿಕೆ ಸಂಬಂಧಿಸಿದ ರಸಪ್ರಶ್ನೆ, ಪ್ರದರ್ಶನ ಹಾಗೂ ಹೈನುಗಾರಿಕೆ ಅಭಿವೃದ್ಧಿ ವಿಚಾರ ಸಂಕಿರಣಗಳು ನಡೆಯಲಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಹೈನುಗಾರಿಕೆ ಇಲಾಖೆ ಅಧಿಕಾರಿಗಳು ಮುಂತಾದವರು ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಅ.14 ರಂದು ಕಾರಡ್ಕ ಬ್ಲಾಕ್ ಕ್ಷೀರ ಕೃಷಿಕರ ಸಂಗಮ
0
ಅಕ್ಟೋಬರ್ 13, 2022
Tags





