ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕ ಇದರ ಆಶ್ರಯದಲ್ಲಿ ಗಾಂಧೀಜಯಂತಿ ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷ ವೈ. ವಿ ಸುಬ್ರಹ್ಮಣ್ಯ ಭಟ್ ಸಭೆÉಯ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಶಶಿಧರ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಂಥಾಲಯದ ಅಧ್ಯಕ್ಷರಾಗಿದ್ದ ದಿ. ಹರಿಹರ ಭಟ್ ಅವರ ಭಾವಚಿತ್ರವನ್ನು ಅವರ ಪುತ್ರ ಡಾ. ಪ್ರಕಾಶ್ ವೈ.ಎಚ್. ಹಸ್ತಾಂತರಿಸಿದರು. ಮಾಲತಿ ಜಿ ಭಟ್ ಪ್ರಾರ್ಥಿಸಿ, ಕಾರ್ಯದರ್ಶಿ ಡಾ ವೇಣುಗೋಪಾಲ್ ಕೆ ಸ್ವಾಗತಿಸಿದರು. ಶಾಂತಕುಮಾರಿ ಕಳೆಯತ್ತೋಡಿ ವಂದಿಸಿದರು.
ಏತಡ್ಕ ಗ್ರಂಥಾಲಯದಲ್ಲಿ ಗಾಂಧೀಜಯಂತಿ ಆಚರಣೆ
0
ಅಕ್ಟೋಬರ್ 13, 2022
Tags




.jpg)
