ಕುಂಬಳೆ: ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶಕ್ಕೆ ಕರ್ನಾಟಕ ಸರ್ಕಾರದಿಂದ ಉತ್ತಮ ಅನುದಾನ ಸಿಗುವ ದೃಷ್ಟಿಯಲ್ಲಿ ಸಮಿತಿಯ ಪರವಾಗಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ವಿ. ಸುನಿಲ್ ಕುಮಾರ್ ಅವರಿಗೆ ಬೆಂಗಳೂರು ವಿಧಾನಸೌಧದಲ್ಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಿ. ರಘುನಾಥ ಪೈ, ಸಮಿತಿಯ , ಉಪಾಧ್ಯಕ್ಷ ದಾಮೋದರ ದೇಲಂಪಾಡಿ, ಕೆ.ಸಿ. ಮೋಹನ್, ಕೆ. ಸುಧಾಕರ್ ಕಾಮತ್, ಕಾರ್ಯದರ್ಶಿ ಬಿ ವಿಕ್ರಂ ಪೈ, ಸಲಹಾ ಸಮಿತಿ ಸದಸ್ಯ ವಿ.ರವೀಂದ್ರನ್ ಹಾಗೂ ಅರುಣಾ ಭಟ್ ಉಪಸ್ಥಿತರಿದ್ದರು.
ಕರ್ನಾಟಕ ಸಚಿವ ವಿ.ಸುನಿಲ್ ಕುಮಾರ್ ಭೇಟಿಯಾದ ಕಣಿಪುರ ಪ್ರತಿನಿಧಿಗಳು
0
ಅಕ್ಟೋಬರ್ 13, 2022
Tags




.jpeg)
