ವಿವಾಹಿತರಾದ ಸಲಿಂಗಕಾಮಿ ಆದಿಲಾ ಮತ್ತು ನೂರಾ
0
ಅಕ್ಟೋಬರ್ 12, 2022
ಕೊಚ್ಚಿ: ಕೇರಳೀಯ ಸಲಿಂಗಿ ಹುಡುಗಿಯರಾದ ಆದಿಲಾ ಮತ್ತು ನೂರಾ ಪರಸ್ಪರ ಜೊತೆಗೆ ವಾಸಿಸಲು ಬಯಸಿದ್ದರೂ ಸಮಾಜ ಆಸ್ಪದ ನೀಡಿರಲಿಲ್ಲ. ಕೊನೆಗೆ ಹೈಕೋರ್ಟ್‍ನ ಮಧ್ಯಸ್ಥಿಕೆಯ ಬಳಿಕ ಇದೀಗ ಜೊತೆಯಾಗಿದ್ದಾರೆ.
ನ್ಯಾಯಾಲಯದ ಆದೇಶದ ನಂತರ ಇಬ್ಬರೂ ದೇಶದ ಕಾನೂನಿನಂತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಮತ್ತು ಈಗ ಮದುವೆಯಾಗಿದ್ದಾರೆ. ಮದುವೆಯ ಚಿತ್ರಗಳನ್ನು ಫಾತಿಮಾ ನೂರಾ ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಾಗ ಈ ಮಾಹಿತಿ ಬೆಳಕಿಗೆ ಬಂದಿದೆ.
ACHIEVMENT UNLOCKED: TOGETHER FOREVER ಎಂಬ ಶೀರ್ಷಿಕೆಯಲ್ಲಿ ಜೊತೆಗಿರುವ ವಿವಾಹ ಚಿತ್ರಗಳನ್ನು ನೂರಾ ಹಂಚಿಕೊಂಡಿದ್ದಾರೆ. ಇಬ್ಬರು ಲೆಸ್ಬಿಯನ್ ಜೋಡಿಗಳು ನಿನ್ನೆ ವಿವಾಹವಾದರು. ಕೇವಲ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಮದುವೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.
ಇಬ್ಬರೂ ತುಂಬಾ ಸುಂದರವಾದ ಲೆಹೆಂಗಾ ಧರಿಸಿದ್ದರು. ನೂರಾ ಅವರ ಫೇಸ್‍ಬುಕ್ ಪೋಸ್ಟ್‍ನಲ್ಲಿ ವಿವಾಹದ ವೇಳೆ ಧರಿಸಿರುವ ಬಟ್ಟೆ ಮತ್ತು ಆಭರಣಗಳನ್ನು ಸಿದ್ಧಪಡಿಸಿದವರ ಹೆಸರುಗಳು, ಲೆಸ್ಬಿಯನ್ ಚಿಹ್ನೆಯೊಂದಿಗೆ ವಿಶೇಷವಾಗಿ ಅಲಂಕರಿಸಿದ ಕೇಕ್ ಮತ್ತು ಫೆÇೀಟೋಗ್ರಫಿಯನ್ನು ವಿವರಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಕೇರಳದಲ್ಲಿ ಆದಿಲಾ ನಸ್ರಿನ್ ಮತ್ತು ನೂರಾ ಫಾತಿಮಾ ಬಗ್ಗೆ ಚರ್ಚೆ ನಡೆದಿತ್ತು. ತನ್ನ ಸಂಗಾತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಆದಿಲಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಗೃಹಬಂಧನದಲ್ಲಿದ್ದ ಕೋಝಿಕ್ಕೋಡ್ ಮೂಲದ ನೂರಾ ಫಾತಿಮಾ ನ್ಯಾಯಾಲಯಕ್ಕೆ ಹಾಜರಾದರು. ನಂತರ ಒಟ್ಟಿಗೆ ವಾಸಿಸಲು ನ್ಯಾಯಾಲಯ ಅನುಮತಿ ನೀಡಿತು.
ಆದಿಲಾ ಮತ್ತು ನೂರಾ ಅವರು ಸಲಿಂಗಕಾಮಿಗಳಾಗಿದ್ದರಿಂದ ಮನೆಯಲ್ಲಿ ಕ್ರೂರ ಚಿತ್ರಹಿಂಸೆ ನೀಡಲಾಗಿತ್ತು. ಆದರೆ ಕೇರಳ ಹೈಕೋರ್ಟ್ ಮಧ್ಯಪ್ರವೇಶದಿಂದ ಇಬ್ಬರ ಕನಸು ನನಸಾಗಿದೆ.
Tags





