ನವದೆಹಲಿ: ಕ್ಷಯ ರೋಗ ನಿರ್ಮೂಲನೆಗಾಗಿ ಸಕ್ರಿಯ ಟಿಬಿ ಪ್ರಕರಣ ಪತ್ತೆ, ಸಮುದಾಯ ವ್ಯಾಪಿ ತಪಾಸಣೆ ಮತ್ತು ಸಮುದಾಯಗಳಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲ ವಿಸ್ತರಿಸಲು ಭಾರತ ಸರ್ಕಾರ ಹೂಡಿಕೆ ಮಾಡಬೇಕು ಎಂದು ಕ್ಷಯರೋಗ ಮತ್ತು ಶ್ವಾಸಕೋಶ ಕಾಯಿಲೆಗಳ ವಿರುದ್ಧದ ಅಂತರರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ.
ಗೈ ಮಾರ್ಕ್ಸ್ ಹೇಳಿದ್ದಾರೆ.
1920 ರಲ್ಲಿ ಸ್ಥಾಪಿತವಾದ ಒಕ್ಕೂಟ ಅಥವಾ ಯೂನಿಯನ್, ಕ್ಷಯ ಮತ್ತು ಶ್ವಾಸಕೋಶದ ಕಾಯಿಲೆಗಳ ನಿರ್ಮೂಲನೆಗೆ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆ ಆಗಿದೆ.
ಇತ್ತೀಚಿನ ಸಂವಾದದಲ್ಲಿ ಮಾತನಾಡಿದ ಪ್ರೊಫೆಸರ್ ಮಾರ್ಕ್ಸ್, ಕ್ಷಯರೋಗ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದು. ಪ್ರತಿ ವರ್ಷ 1.5 ಮಿಲಿಯನ್ ಜೀವ ತೆಗೆದುಕೊಳ್ಳುತ್ತದೆ ಮತ್ತು ಸುಮಾರು 10,000 ವರ್ಷಗಳಿಂದಲೂ ಇದೆ. ಅತ್ಯಂತ ಸಾಂಕ್ರಾಮಿಕ ಸ್ವಭಾವದಿಂದಾಗಿ ಅದರ ಪ್ರಸರಣ ಸರಪಳಿ ಮುರಿಯುವುದು ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಬಳಿಕ ಕ್ಷಯರೋಗದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಎರಡು ದಶಕಗಳ ನಿಧಾನಗತಿಯ ಕುಸಿತ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು.





