ಕಾಸರಗೋಡು: ಬೇಕಲ ಕೋಟೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಬೀಚ್ ಉತ್ಸವದ ಭಿತ್ತಿಪತ್ರವನ್ನು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಭಾನುವಾರ ಬಿಡುಗಡೆಗೊಳಿಸಿದರು.
ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಬಿಆರ್ ಡಿಸಿ ಎಂಡಿ. ಶಿಜಿನ್, ವಕೀಲ ಕೆ.ಶ್ರೀಕಾಂತ್, ಮಾಜಿ ಶಾಸಕ ಕೆ. ಕುಞÂರಾಮನ್, ಪ್ರಮೋದ್ ಪೆರಿಯ, ವಿಷ್ಣು ಹೆಬ್ಬಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಆರ್‍ಡಿಸಿ, ಡಿಟಿಪಿಸಿ, ಕುಟುಂಬಶ್ರೀ, ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬೀಚ್ ಉತ್ಸವ ನಡೆಯಲಿದೆ. ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ಬೀಚ್ ಕಾರ್ನೀವಲ್, ವಿವಿಧ ಪ್ರದರ್ಶನ ಮಳಿಗೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಇರಲಿದೆ. ಕಾಸರಗೋಡಿನ ಸಂಸ್ಕೃತಿ, ಇತಿಹಾಸ, ರುಚಿಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡುವುದುರ ಜತೆಗೆ ಜಿಲ್ಲೆಯ ಇತರ ಪ್ರವಾಸೋದ್ಯಮ ಕೇಂದ್ರಗಳನ್ನು ಪರಿಚಯಿಸುವ ಪ್ರದರ್ಶನಗಳೂ ಇರಲಿದೆ. ಈ ಮೂಲಕ ಕೇರಳ ಹಾಗೂ ಇತರ ರಾಜ್ಯಗಳಿಂದಲೂ ಹೆಚ್ಚಿನ ಜನರನ್ನು ಈ ಪ್ರವಾಸಿ ತಾಣಗಳಿಗೆ ಸೆಳೆಯುವ ಪ್ರಯತ್ನ ಮಾಡಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಆ ಪ್ರದೇಶದ ಜನರ ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಬೀಚ್ ಉತ್ಸವ ನಡೆಸಲಾಗುತ್ತಿದೆ.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವ: ಭಿತ್ತಿಪತ್ರ ಬಿಡುಗಡೆ
0
ಅಕ್ಟೋಬರ್ 25, 2022
Tags





