ಪತ್ತನಂತಿಟ್ಟ: ಅವಳಿ ಅಭಿಚಾರ ಹತ್ಯೆ ನಡೆದ ಇಳಂತೂರಿನಲ್ಲಿರುವ ಭಗವಾಲ್ ಸಿಂಗ್ ನ ಮನೆಯಲ್ಲಿ ಮೂಳೆ ಪತ್ತೆಯಾಗಿದೆ. ಹೆಚ್ಚಿನ ಅವಶೇಷಗಳನ್ನು ಪತ್ತೆಹಚ್ಚಲು ಇಂದು ಮತ್ತೆ ನಡೆಸಿದ ತನಿಖೆಯಲ್ಲಿ ಮೂಳೆಗಳು ಪತ್ತೆಯಾಗಿದೆ.
ಮೂಳೆಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಮನುಷ್ಯರದ್ದೇ ಎಂದು ದೃಢಪಡಿಸಲಾಗುವುದು.
ಬೇರೊಬ್ಬರ ಮನೆಯ ಪಕ್ಕದಲ್ಲಿರುವ ಭಗವಾಲ್ ಸಿಂಗ್ ಅವರ ಹಿತ್ತಲಿನಲ್ಲಿ ಮೂಳೆ ಪತ್ತೆಯಾಗಿದೆ. ಪರೀಕ್ಷೆ ವೇಳೆ ಇಲ್ಲಿಗೆ ಆಗಮಿಸಿದಾಗ ನಾಯಿ ಅಸಹಜ ವರ್ತನೆ ತೋರಿತ್ತು. ಇದಾದ ಬಳಿಕ ಕೂಲಂಕುಷವಾಗಿ ಪರಿಶೀಲಿಸಿದಾಗ ಮೂಳೆ ಪತ್ತೆಯಾಗಿದೆ. ಖಚಿತತೆ ಇಲ್ಲದ್ದರಿಂದ ಪರೀಕ್ಷೆಗೆ ಕಳಿಸಲಾಗಿದೆ. ಭಗವಾಲ್ ಸಿಂಗ್ ನ ಮನೆಯ ಸಮೀಪ ಕಸಾಯಿಖಾನೆ ಇದೆ. ಇದು ಅಲ್ಲಿಯ ಅವಶೇಷವೂ ಆಗಿರಬಹುದು ಎಂಬ ಅಭಿಪ್ರಾಯವೂ ಇದೆ.
ಆ ಪ್ರದೇಶದಲ್ಲಿ ತನಿಖೆ ಮುಂದುವರಿದಿದೆ. ಎರಡು ಪೋಲೀಸ್ ಶ್ವಾನಗಳ ಸಹಾಯದಿಂದ ಪೋಲೀಸರು ತನಿಖೆ ಮುಂದುವರೆಸಿದ್ದಾರೆ. ಅನುಮಾನಾಸ್ಪದ ಸ್ಥಳಗಳನ್ನು ಅಗೆದು ಪರಿಶೀಲಿಸಲಾಗುತ್ತಿದೆ. ತನಿಖಾ ತಂಡ ಬೆಳಗ್ಗೆಯಿಂದಲೇ ಇಳಂತೂರಿನಲ್ಲಿರುವ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಆರೋಪಿಗಳು ಹೆಚ್ಚಿನ ಜನರನ್ನು ಕೊಂದು ನಂತರ ಶವಗಳನ್ನು ಮನೆಯ ಕಾಂಪೌಂಡ್‍ನಲ್ಲಿ ಹೂತಿಟ್ಟಿದ್ದಾರೆ ಎಂದು ಪೋಲೀಸರು ನಂಬಿದ್ದಾರೆ. ಇದನ್ನು ಖಚಿತಪಡಿಸಲು ಪರಿಶೀಲನೆಗಳು ನಡೆಯುತ್ತಿದೆ.
ಇಳಂತೂರು ಜೋಡಿ ಹತ್ಯೆ; ಭಗವಾಲ್ ಸಿಂಗ್‍ನ ಮನೆಯಿಂದ ಮೂಳೆ ಪತ್ತೆ
0
ಅಕ್ಟೋಬರ್ 15, 2022





