ಕೊಚ್ಚಿ: ರಾಜ್ಯ ಶಾಲಾ ವಿಜ್ಞಾನ ಮೇಳ ಗುರುವಾರ ಎರ್ನಾಕುಳಲಂನಲ್ಲಿ ಆರಂಭವಾಗಲಿದೆ. ಆರು ಸ್ಥಳಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧೆಡೆಯಿಂದ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ನವೆಂಬರ್ 10 ರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಎರ್ನಾಕುಳಂ ಸರ್ಕಾರಿ ಗಲ್ರ್ಸ್ ಹೈಯರ್ ಸೆಕೆಂಡರಿ ಶಾಲೆಯ ಅಂಗಳದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಜೀವನ್ ಬಾಬು ಧ್ವಜಾರೋಹಣ ಮಾಡುವ ಮೂಲಕ ಮೇಳ ಆರಂಭವಾಗಲಿದೆ.
ಎರ್ನಾಕುಳಂ ಟೌನ್ ಹಾಲ್‍ನಲ್ಲಿ ಬೆಳಗ್ಗೆ 10.30ಕ್ಕೆ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಉದ್ಘಾಟಿಸುವರು. ಶಾಸಕ ಟಿ.ಜೆ. ವಿನೋದ್ ಅಧ್ಯಕ್ಷತೆ ವಹಿಸುವರು. ನಾಳೆ ನೋಂದಣಿ. ವಿಜ್ಞಾನ, ಸಮಾಜ ವಿಜ್ಞಾನ, ವರ್ಕ್ ಎಸ್ಪೀರಿಯನ್ಸ್, ಐಟಿ ಮತ್ತು ಗಣಿತ ಹೀಗೆ ಐದು ವಿಭಾಗಗಳಲ್ಲಿ 154 ವಿಭಾಗಗಳಲ್ಲಿ ಸ್ಪರ್ಧೆಗಳಿವೆ.
ಎರ್ನಾಕುಳಂ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆ, ತೇವರ ಸೇಕ್ರೆಡ್ ಹಾರ್ಟ್ ಎಚ್‍ಎಸ್‍ಎಸ್, ಎರ್ನಾಕುಳಂ ಎಸ್‍ಆರ್‍ವಿ ಎಚ್‍ಎಸ್‍ಎಸ್, ಎರ್ನಾಕುಳಂ ದಾರುಲ್ ಉಲೂಮ್ ಎಚ್‍ಎಸ್‍ಎಸ್, ಕಚೇರಿಪಾಡಿ ಸೇಂಟ್ ಆಂಥೋನಿ ಎಚ್‍ಎಸ್‍ಎಸ್ ಮತ್ತು ಎರ್ನಾಕುಳಂ ಸೇಂಟ್ ಆಲ್ಬಟ್ರ್ಸ್ ಎಚ್‍ಎಸ್‍ಎಸ್ ಎಂಬ ಆರು ಸ್ಥಳಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕೋವಿಡ್ ವ್ಯಾಪಕತೆಯ ಎರಡು ವರ್ಷಗಳ ನಂತರ ನಡೆವ ವಿಜ್ಞಾನ ಮೇಳ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ನಾಳೆ ರಾಜ್ಯ ಶಾಲಾ ವಿಜ್ಞಾನ ಮೇಳದ ಉದ್ಘಾಟನೆ; 154 ಸ್ಪರ್ಧೆಯ ನೋಂದಣಿಯಿಂದ ಆರಂಭ
0
ನವೆಂಬರ್ 08, 2022





