ತಿರುವನಂತಪುರ: ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಆರ್.ಎನ್. ಸಿಂಗ್ ನಿನ್ನೆ ಅಧಿಕಾರ ಸ್ವೀಕರಿಸಿದರು.
1986 ರ ಬ್ಯಾಚ್ ಐಆರ್ಎಸ್ಇ ಕೇಡರ್ (ಇಂಡಿಯನ್ ರೈಲ್ವೇ ಸರ್ವೀಸ್ ಆಫ್ ಇಂಜಿನಿಯರ್ಸ್) ಅಧಿಕಾರಿ, ಆರ್.ಎನ್. ಸಿಂಗ್ ಅವರು ದೆಹಲಿ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಮತ್ತು ಡಿಎಫ್ ಸಿ ಸಿ ಐ ಎಲ್ (ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾಪೆರ್Çರೇಷನ್ ಆಫ್ ಇಂಡಿಯಾ ಲಿಮಿಟೆಡ್) ವ್ಯವಸ್ಥಾಪಕ ನಿರ್ದೇಶಕರ ಸ್ಥಾನವನ್ನು ಹೊಂದಿದ್ದಾರೆ.
ಅವರು ಭಾರತೀಯ ರೈಲ್ವೆ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಪ್ರಮುಖ ಕಾರ್ಯನಿರ್ವಾಹಕ ಮತ್ತು ನಿರ್ವಹಣಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಆರ್.ಎನ್. ಸಿಂಗ್ ಅವರು ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ, ಮೂಲಸೌಕರ್ಯ, ರೈಲ್ವೇ ಸಚಿವಾಲಯ ಮತ್ತು ರೈಲ್ವೆ ಮಂಡಳಿಯ ಕಾರ್ಯದರ್ಶಿ ಹುದ್ದೆಗಳನ್ನು ಸಹ ನಿರ್ವಹಿಸಿದ್ದಾರೆ.
ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್ ಅಧಿಕಾರ ಸ್ವೀಕಾರ
0
ನವೆಂಬರ್ 08, 2022





