HEALTH TIPS

ಡಿ.1 ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ಓಪನ್

 

           ನವದೆಹಲಿ: ಡಿಸೆಂಬರ್ 1 ರಿಂದ ವಾರದಲ್ಲಿ ಐದು ದಿನಗಳ ಕಾಲ ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

                ಅಧಿಕೃತ ರಜಾದಿನಗಳನ್ನು ಹೊರತುಪಡಿಸಿ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ 10-11, 11-12, ಮಧ್ಯಾಹ್ನ 12-1, 2-3 ಮತ್ತು 3-4 ರ ಸಮಯದಲ್ಲಿ ರಾಷ್ಟ್ರಪತಿ ಭವನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿದೆ. 

              ರಾಷ್ಟ್ರಪತಿ ಭವನ ಪ್ರವಾಸದ ಹೊರತಾಗಿ ಮಂಗಳವಾರದಿಂದ ಭಾನುವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ವಾರದಲ್ಲಿ ಆರು ದಿನ ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣಕ್ಕೆ ಭೇಟಿ ನೀಡಬಹುದು.

                 ಪ್ರತಿ ಶನಿವಾರ  ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಬೆಳಿಗ್ಗೆ 8-9 ಗಂಟೆಗೆ ಗಾರ್ಡ್ ಬದಲಾವಣೆ ಸಮಾರಂಭವನ್ನು ವೀಕ್ಷಿಸಬಹುದು. ಶನಿವಾರ ಅಧಿಕೃತ ರಜೆಯಾಗಿದ್ದರೆ ಅಥವಾ ರಾಷ್ಟ್ರಪತಿ ಭವನದಿಂದ ಅಧಿಸೂಚನೆ ಬಂದರೆ ಸಮಾರಂಭ ನಡೆಯುವುದಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries