ನವದೆಹಲಿ :2020-21ರ ಸಾಲಿನಲ್ಲಿ ಶಾಲಾ ಶಿಕ್ಷಣದಲ್ಲಿ ಶ್ರೇಷ್ಠ ನಿರ್ವಹಣೆಯನ್ನು ಪ್ರದರ್ಶಿಸಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಪ್ರಕಟಿಸಿದ್ದು, ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್ (Kerala, Maharashtra and Punjab)ಅಗ್ರಸ್ಥಾನಗಳನ್ನು ಅಲಂಕರಿಸಿವೆ.
ಚಂಡೀಗಢ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನ(Chandigarh, Maharashtra, Gujarat and Rajasthan) ಈ ಪಟ್ಟಿಯಲ್ಲಿ ಆನಂತರದ ಸ್ಥಾನಗಳಲ್ಲಿವೆ.
ಅರುಣಾಚಲ ಪ್ರದೇಶವು ಅತ್ಯಂತ ಕನಿಷ್ಠ ಮಟ್ಟದ ನಿರ್ವಹಣೆಯನ್ನು ತೋರಿದ ರಾಜ್ಯವಾಗಿದೆ.
2019-20ರ ಸಾಲಿನಲ್ಲಿ ಪಂಜಾಬ್, ಚಂಡೀಗಢ, ತಮಿಳುನಾಡು, ಅಂಡಮಾನ್-ನಿಕೋಬಾರ್‌ಹಾಗೂ ಕೇರಳ ಮೊದಲ ಏಳು ಸ್ಥಾನಗಳನ್ನು ಪಡೆದಿದ್ದವು.
ಕಲಿಕಾ ಫಲಿತಾಂಶ ಹಾಗೂ ಶಾಲಾಡಳಿತ ನಿರ್ವಹಣೆಗೆ ಸಂಬಂಧಿಸಿದ 70 ಸೂಚಕಗಳನ್ನು ಆಧರಿಸಿ ಶಾಲಾ ಶಿಕ್ಷಣದಲ್ಲಿ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ನಿರ್ವಹಣಾ ಗ್ರೇಡ್ ಸೂಚ್ಯಂಕ (ಪಿಜಿಐ)ಗಳನ್ನು ವಿಶ್ಲೇಷಿಸಲಾಗುತ್ತದೆ. ಕಲಿಕಾ ಫಲಿತಾಂಶ, ಕಲಿಕಾ ಲಭ್ಯತೆ, ಮೂಲಸೌಕರ್ಯ ಹಾಗೂ ಸೌಲಭ್ಯಗಳು,ಶಿಕ್ಷಣ ನೀತಿ ಈ ಶ್ರೇಣಿಗಳ ಆಧಾರದಲ್ಲಿ ಶ್ರೇಣಿಗಳನ್ನು ನೀಡಲಾಗುತ್ತದೆ.
950ರಿಂದ 1000 ಸಾವಿರ ಒಳಗೆ ಅಂಕಗಳನ್ನು ಪಡೆದ ರಾಜ್ಯಗಳು, ಕೇಂದ್ರಾಡಳಿತಗಳನ್ನು 1ನೇ ಸ್ತರದಲ್ಲಿ ಇರಿಸಲಾಗುತ್ತದೆ. 551ಕ್ಕಿಂತ ಕಡಿಮೆ ಅಂಕಗಳಿಗೆ ಅತ್ಯಂತ ಕನಿಷ್ಠ ಅಂದರೆ 10ನೇ ಸ್ತರವನ್ನು ನೀಡಲಾಗುತ್ತದೆ.
ಕಳೆದ ಸಾಲಿನಂತೆಯೇ ಈ ಸಲವೂ ಚಂಡೀಗಡ, ಗುಜರಾತ್ ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಕ್ರಮವಾಗಿ 927,903, 903 ಹಾಗೂ 902 ಅಂಕಗಳನ್ನು ಪಡೆದಿವೆ. ಕೇರಳ, ಪಂಜಾಬ್ ಹಾಗೂ ಮಹಾರಾಷ್ಟ್ರ ಗರಿಷ್ಠ 927 ಅಂಕಗಳನ್ನು ಪಡೆದಿವೆ.
ಈ ಹಿಂದಿನ ವರ್ಷಗಳಂತೆ , 2020-21ರ ಸಾಲಿನಲ್ಲಿಯೂ ಯಾವುದೇ ರಾಜ್ಯಕ್ಕೂ 1ನೇ ಸ್ತರವನ್ನು ಪಡೆಯಲು ಸಾಧ್ಯವಾಗಿಲ್ಲ.
ದಿಲ್ಲಿ, ಕರ್ನಾಟಕ, ಶ್ಚಿಮ ಬಂಗಾಳ, ಒಡಿಶಾ,ಹಿಮಾಚಲ ಪ್ರದೇಶ, ಉತ್ತರಪ್ರದೇಶ,ಹರ್ಯಾಣ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ್,ದಾದ್ರಾ-ನಗರಹವೇಲಿ ಹಾಗೂ ದಾಮನ್-ದಿಯು 851 ಹಾಗೂ 900 ಅಂಕಗಳೊಂದಿಗೆ ಮೂರನೇ ಸ್ತರ (ಲೆವೆಲ್ 3) ಪಡೆದಿವೆ.
ಅಸ್ಸಾಮ್, ಚತ್ತೀಸ್‌ಗಢ, ಜಮ್ಮುಕಾಶ್ಮೀರ, ಜಾರ್ಖಂಡ್, ಲಡಾಖ್ ಹಾಗೂ ತ್ರಿಪುರಾ ರಾಜ್ಯಗಳು 4ನೇ ಸ್ತರ (801ರಿಂದ 850 ಅಂಕಗಳು) ಹಾಗೂ 5ನೇ ಸ್ತರಗಳನ್ನು ಸಾಧಿಸಿವೆ.
ಬಿಹಾರ, ಗೋವಾ, ಮಧ್ಯಪ್ರದೇಶ, ಮಿಝೊರಾಂ, ಸಿಕ್ಕಿಂ ಹಾಗೂ ತೆಲಂಗಾಣ ರಾಜ್ಯಗಳು 5ನೇ ಸ್ತರವನ್ನು ಪಡೆದಿವೆ. ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಉತ್ತರಾಖಂಡ 6ನೇ ಸ್ತರದಲ್ಲಿವೆ (701ರಿಂದ 750 ಅಂಕಗಳು), ಅರುಣಾಚಲ ಪ್ರದೇಶ ಅತ್ಯಂತ ಕಳಪೆ ಸಾಧನೆ ಮಾಡಿದ್ದು 669 ಅಂಕಗಳೊಂದಿಗೆ 7ನೇ ಸ್ತರದಲ್ಲಿವೆ.
ಕಲಿಕಾ ಫಲಿತಾಂಶದಲ್ಲಿ ರಾಜಸ್ಥಾನ ಗರಿಷ್ಠ ಅಂಕಗಳನ್ನು ಪಡೆದಿದ್ದು, ಕರ್ನಾಟಕ, ಚಂಡೀಗಡ, ಜಾರ್ಖಂಡ್ ಕ್ರಮವಾಗಿ ಆನಂತರದ ಸ್ಥಾನದಲ್ಲಿವೆ. ಕಲಿಕಾ ಲಭ್ಯತೆಯಲ್ಲಿ ಕೇರಳ,ಪಂಜಾಬ್,ದಿಲ್ಲಿ ಹಾಗೂ ತಮಿಳುನಾಡು ಅಗ್ರಸ್ಥಾನಗಳಲ್ಲಿವೆ.


