ಬೆಂಗಳೂರು: ಜಗತ್ತಿನಾದ್ಯಂತ 2019 ರಲ್ಲಿ ಹಾವು ಕಡಿತ ಪ್ರಕರಣಗಳಲ್ಲಿ (snakebites) 63,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, ಈ ಪ್ರಕರಣಗಳ ಪೈಕಿ ಗರಿಷ್ಠ ಅಂದರೆ ಶೇ 80 ಕ್ಕೂ ಹೆಚ್ಚು, 51,000 ಕ್ಕೂ ಅಧಿಕ ಮಂದಿ ಭಾರತದವರಾಗಿದ್ದಾರೆ.
ಎರಡನೇ ಸ್ಥಾನದಲ್ಲಿ ಪಾಕಿಸ್ತಾನವಿದ್ದು ಆ ದೇಶದಲ್ಲಿ 2019 ರಲ್ಲಿ 2,070 ಮಂದಿ ಹಾವು ಕಡಿತ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ನೇಚರ್ ಕಮ್ಯುನಿಕೇಶನ್ಸ್ ಎಂಬ ನಿಯತಕಾಲಿಕದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಅಂಕಿಅಂಶಗಳನ್ನು ಗಮನಿಸಿದಾಗ 2008 ರಿಂದ ಹಾವು ಕಡಿತ ಪ್ರಕರಣಗಳಲ್ಲಿ ಉಂಟಾಗುವ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 1990 ರಿಂದೀಚೆಗೆ ಹಾವು ಕಡಿತ ಪ್ರಕರಣದ ಸಾವಿನ ಪ್ರಮಾಣ ಶೇ 36 ರಷ್ಟು ಇಳಿಕೆಯಾಗಿವೆ ಎಂದು ವರದಿಯಿಂದ ತಿಳಿದು ಬರುತ್ತದೆ.
2019 ರಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ 54,600 ಸಾವುಗಳು ದಕ್ಷಿಣ ಏಷ್ಯಾದ ದೇಶಗಳಲ್ಲಿ ಸಂಭವಿಸಿದ್ದರೆ ಆಫ್ರಿಕಾದಲ್ಲಿ 7,331 ಮಂದಿ ಹಾಗೂ ಅಮೆರಿಕಾದಲ್ಲಿ 370 ಮಂದಿ ಸಾವನ್ನಪ್ಪಿದ್ದಾರೆ.


