HEALTH TIPS

ಏನೇ ಮಾಡಿದರೂ ಮೈ ತೂಕ ಕಡಿಮೆಯಾಗುತ್ತಿಲ್ಲವೇ? ಈ 3 ಹಾರ್ಮೋನ್‌ ಪರೀಕ್ಷೆ ಮಾಡಿಸಿ

ಕೆಲವರು ತೂಕ ಇಳಿಕೆಗೆ ತುಂಬಾನೇ ಪ್ರಯತ್ನ ಪಡುತ್ತಾರೆ, ಆದರೆ ಏನು ಮಾಡಿದರೂ ತೂಕ ಕಡಿಮೆಯಾಗಲ್ಲ. ಡಯಟ್, ವ್ಯಾಯಾಮ ಎಲ್ಲಾ ಮಾಡಿದರೂ ಮೈ ತೂಕ ಕರಗಿಸಲು ತುಂಬಾನೇ ಕಷ್ವವಾಗುವುದು.

'ನಾನು ಎಷ್ಟೆಲ್ಲಾ ಕಷ್ಟಪಡುತ್ತೇನೆ, ಏನು ಮಾಡಿದರೂ ಮೈ ತೂಕ ಮಾತ್ರ ಒಂದಿಷ್ಟೂ ಕಡಿಮೆಯಾಗುತ್ತಿಲ್ಲ, ಏನು ಮಾಡಬೇಕೆಂದೇ ಗೊತ್ತಾಗ್ತಾ ಇಲ್ಲ' ಎಂದು ತುಂಬಾ ಜನ ಹೇಳುತ್ತಿರುತ್ತಾರೆ. ನೀವು ತೂಕ ಇಳಿಕೆಗಾಗಿ ಕಷ್ಟ ಪಟ್ಟರೂ ಅದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದಾದರೆ ನೀವು ಕೆಲವೊಂದು ಹಾರ್ಮೋನ್‌ ಟೆಸ್ಟ್‌ ಮಾಡಿಸಿ ಎಂದು ನ್ಯೂಟ್ರಿಷಿಯನಿಸ್ಟ್ ರಾಶಿಚೌಧರಿ ಸಲಹೆ ನೀಡುತ್ತಾರೆ.


ನಮ್ಮ ಶರೀರದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದರೆ ಡಯಟ್, ವ್ಯಾಯಾಮ ಏನೂ ಮಾಡಿದರೂ ಮೈ ತೂಕ ಕಡಿಮೆಯಾಗಲ್ಲ, ಹಾರ್ಮೋನ್‌ಗಳನ್ನು ಸಮತೋಲನಕ್ಕೆ ತಂದ ಮೇಲಷ್ಟೇ ನೀವು ಬಯಸಿದಂತೆ ತೆಳ್ಳಗಾಗಲು ಸಾಧ್ಯ. ಹಾಗಾದರೆ ಮೈ ತೂಕ ಕಡಿಮೆಯಾಗುತ್ತಿಲ್ಲ ಎಂದಾದರೆ ಅದಕ್ಕೆ ಕಾರಣವೇನು ಎಂದು ತಿಳಿಯಲು ಈ ಹಾರ್ಮೋನ್‌ ಟೆಸ್ಟ್‌ಗಳನ್ನು ಮಾಡಿಸಿ:

1. ಇನ್ಸುಲಿನ್ ದೇಹದಲ್ಲಿ ಇನ್ಸುಲಿನ್‌ ಅಸಮತೋಲನವಿದ್ದರೂ ಮೈ ತೂಕ ಹೆಚ್ಚಾಗುವುದು. ಸೊಂಟದ ಸುತ್ತಳತೆ ಪುರುಷರಲ್ಲಿ 40 ಇಂಚು, ಮಹಿಳೆಯರಲ್ಲಿ 35 ಇಂಚಿಗಿಂತ ಅಧಿಕವಿದ್ದರೆ ಅಧಿಕ ಮೈ ತೂಕ ಹೊಂದಿದ್ದಾರೆ ಎಂದರ್ಥ. ನಿಮ್ಮ ಮೈ ತೂಕ ತುಂಬಾ ಅಧಿಕವಿದ್ದರೆ ಇನ್ಸುಲಿನ್‌ ಪರೀಕ್ಷೆ ಮಾಡಿಸಿ. ಪರೀಕ್ಷೆ: ಇನ್ಸುಲಿನ್‌ ಪರೀಕ್ಷೆಯನ್ನು ಖಾಲಿ ಹೊಟ್ಟೆಯಲ್ಲಿ ಹಾಗೂ ಊಟವಾಗಿ 2 ಗಂಟೆಯ ಬಳಿಕ ಮಾಡಿಸಬೇಕು.

2. ಥೈರಾಯ್ಡ್‌ ಥೈರಾಯ್ಡ್‌ ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ ಅದರಲ್ಲೂ ಹೈಪೋಥೈರಾಯ್ಡ್ ಉಂಟಾದಾಗ ಮೈ ತೂಕ ತುಂಬಾನೇ ಹೆಚ್ಚುವುದು. ಹೈಪೋಥೈರಾಯ್ಡ್ ಇದ್ದರೆ ಮೈ ತೂಕ ತುಂಬಾ ಹೆಚ್ಚಾಗುವುದರ ಜೊತೆಗೆ ಸುಸ್ತು, ಮಲಬದ್ಧತೆ ಈ ಬಗೆಯ ಸಮಸ್ಯೆ ಕಾಣಿಸಿಕೊಳ್ಳುವುದು. ಥೈರಾಯ್ಡ್ ಪರೀಕ್ಷೆ: ಥೈರಾಯ್ಡ್‌ ಹಾರ್ಮೋನ್‌ಗಳ ಬಗ್ಗೆ ತಿಳಿಯಲು SH, Free T3 ಮತ್ತು Free T4 ಮಾಡಿಸಿ.

3. ಪ್ರೊಲ್ಯಾಕ್ಟಿನ್ ಪರೀಕ್ಷೆ ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರಲ್ಲಿ ಪ್ರೊಲ್ಯಾಕ್ಟಿನ್‌ ಪ್ರಮಾಣ ಅಧಿಕವಿರುವುದು ಸಹಜ. ಇನ್ನು ಅತಿಯಾದ ಮಾನಸಿಕ ಒತ್ತಡ ಹಾಗೂ ಕೆಲವೊಂದು ಔಷಧಗಳಿಂದ ಕೂಡ ಪ್ರೊಲ್ಯಾಕ್ಟಿನ್ ಹೆಚ್ಚಾಗುವುದು. ಯಾರಲ್ಲಿ ಪ್ರೊಲ್ಯಾಕ್ಟಿನ್‌ ಪ್ರಮಾಣ ಅಧಿಕವಿರುತ್ತದೋ ಅವರ ಮೈ ತೂಕ ಹೆಚ್ಚಾಗುವುದು. ಪ್ರೊಲ್ಯಾಕ್ಟಿನ್‌ ಪರೀಕ್ಷೆ ಮಾಡಿದರೆ ತಿಳಿಯುವುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries