HEALTH TIPS

ಲಸಿಕೆ ಪಡೆದವರಿಗೂ ಹರಡುತ್ತಿದೆ XBB ಒಮಿಕ್ರಾನ್ ರೂಪಾಂತರ, ಇದರ ಲಕ್ಷಣಗಳೇನು?

 ಕೊರೊನಾ ಕಾಟ ಸದ್ಯಕ್ಕೆ ದೂರಾಗುವಂತೆ ಕಾಣುತ್ತಿಲ್ಲ, ಬೇರೆ-ಬೇರೆ ರೂಪದಲ್ಲಿ ಇನ್ನೂ ಭಯ ಹುಟ್ಟಿಸುತ್ತಲೇ ಇದೆ. ಒಮಿಕ್ರಾನ್ನ ಹಲವಾರು ರೂಪಾಂತರುಗಳು ಪತ್ತೆಯಾಗಿವೆ, ಆದರೆ ಈ ಎಲ್ಲಾ ರೂಪಾಂತರಗಳಿಗಿಂತ ಈಗ ಬಂದಿರುವ XBB ರೂಪಾಂತರ ತುಂಬಾನೇ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಏಕೆಂದರೆ ಲಸಿಕೆ ಪಡೆದವರಿಗೂ ಈ ವೈರಸ್‌ ತಗುಲುವುದರಿಂದ ಈ ವೈರಸ್‌ ಮತ್ತೊಂದು ಕೊರೊನಾ ಅಲೆ ಸೃಷ್ಟಿಸುವ ಅಪಾಯವಿದೆ ಎನ್ನುತ್ತಿದ್ದಾರೆ ತಜ್ಞರು.

ಈ ಹೊಸ ರೂಪಾಂತರ ವೇಗವಾಗಿ ಹರಡುತ್ತಿದ್ದು ಇದರ ಲಕ್ಷಣಗಳೇನು ಎಂದು ನೋಡೋಣ

ವೇಗವಾಗಿ ಹರಡುತ್ತಿದೆ

ಜಗತ್ತಿನಾದ್ಯಂತ ಈ ರೂಪಾಂತರ ತುಂಬಾ ವೇಗವಾಗಿ ಹರಡುತ್ತಿದೆ, ಆದರೆ ಇದರಿಂದ ಜನರಲ್ಲಿ ಗಂಭೀರ ರೋಗ ಲಕ್ಷಣಗಳು ಕಂಡು ಬರುತ್ತಿಲ್ಲ ಅಲ್ಲದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆ ಇದೆ. ಭಾರತದಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ಬೀರುತ್ತಿಲ್ಲ, ಆದರೆ ಅತೀ ಹೆಚ್ಚಿನ ಜನರಿಗೆ ಹರಡುವ ಸಾಧ್ಯತೆ ಇದೆ.

ಲಸಿಕೆ ಪಡೆದವರ ಮೇಲೂ ದಾಳಿ ಮಾಡುತ್ತಿದೆ ಈ ಒಮಿಕ್ರಾನ್‌ ರೂಪಾಂತರ ಕೊರೊನಾ ಲಸಿಕೆ ಪಡೆದವರಲ್ಲೂ ಕಂಡು ಬರುತ್ತಿದೆ, ಲಸಿಕೆ ಪಡೆದವರಲ್ಲಿ ರೋಗ ಲಕ್ಷಣದ ತೀವ್ರತೆ ಕಡಿಮೆ ಇದೆ. ಈಗಾಗಲೇ 35 ರಾಷ್ಟ್ರಗಳಲ್ಲಿ ಈ ವೈರಸ್‌ ಪತ್ತೆಯಾಗಿದೆ. ಬಾರತದಲ್ಲಿ ಮೊದಲಿಗೆ ಮಹಾರಾಷ್ಟ್ರದಲ್ಲಿ ಕಂಡು ಬಂತು. 32 ರೋಗಿಗಳಲ್ಲಿ 4 ಜನರಷ್ಟೇ ಆಸ್ಪತ್ರೆಗೆ ದಾಖಲಾಗಬೇಕಾಯಿತು, ಉಳಿದವರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿ ಇದ್ದು ಚೇತರಿಸಿಕೊಂಡಿದ್ದಾರೆ.

XBB ಒಮಿಕ್ರಾನ್‌ ರೂಪಾಂತರ ಲಕ್ಷಣಗಳೇನು?

* ಬೇಧಿ

* ಜ್ವರ

* ಚಳಿ-ಜ್ವರ

* ತಲೆಸುತ್ತು

* ಗಂಟಲು ಕೆರೆತ

* ಉಸಿರಾಡಲು ತೊಂದರೆ

* ವಾಸನೆ , ರುಚಿ ತಿಳಿಯಲ್ಲ

ಕೊರೊನಾ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ಆಹಾರ ಹಾಗೂ ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಈ ಆಹಾರಗಳನ್ನು ಸೇವಿಸಿ.

ಗ್ರೀನ್‌ ಟೀ: ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಧಿಕವಿದೆ.

ಮೊಸರು: ಇದರಲ್ಲಿ ಹೊಟ್ಟೆಗೆ ಆರೋಗ್ಯಕರವಾದ ಬ್ಯಾಕ್ಟಿರಿಯಾ ಇರುತ್ತದೆ

ಹಣ್ಣು, ತರಕಾರಿ, ನಟ್ಸ್ ಸೇವಿಸಿ.


 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries