HEALTH TIPS

ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗದ ಚಿನ್ನ: ಆಸ್ಪತ್ರೆಯಲ್ಲಿ ನಡೆಸಿದ ಎಕ್ಸ್-ರೇಯಲ್ಲಿ ಪತ್ತೆಯಾಯಿತು 52 ಲಕ್ಷ ರೂ.ಮೌಲ್ಯದ ಚಿನ್ನದ ಕ್ಯಾಪ್ಸೂಲ್: ಯುವಕ ಬಂಧನ


             ಮಲಪ್ಪುರಂ: ಕರಿಪ್ಪೂರ್ ವಿಮಾನ ನಿಲ್ದಾಣದ ಮೂಲಕ ಮತ್ತೆ ಚಿನ್ನ ಕಳ್ಳಸಾಗಣೆ ನಡೆದಿದೆ. ವಿಲ್ಲ್ಯಾಪಳ್ಳಿ ಮೂಲದ ಶಂಶುದ್ದೀನ್ ಎಂಬಾತನನ್ನು ಪೋಲೀಸರು ಬಂಧಿಸಿದ್ದು, ದೇಹದೊಳಗೆ  ಬಚ್ಚಿಟ್ಟು ಚಿನ್ನಾಭರಣ ಸಾಗಿಸಲು ಯತ್ನಿಸಿದ್ದ.
             ಆತನಿಂದ ಒಂದು ಕಿಲೋ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನವು ಮಾರುಕಟ್ಟೆಯಲ್ಲಿ 52 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
            ಶಂಸುದ್ದೀನ್  ಅಬುಧಾಬಿಯಿಂದ ಏರ್ ಅರೇಬಿಯಾ ವಿಮಾನದಲ್ಲಿ ಕರಿಪ್ಪೂರ್ ತಲುಪಿದ್ದ. ಕಸ್ಟಮ್ಸ್ ತಪಾಸಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ಪೋಲೀಸ್ ಕಣ್ಗಾವಲಿನಲ್ಲಿದ್ದ. ನಂತರ ಈತ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಪೋಲೀಸರು ಬಂಧಿಸಿದ್ದಾರೆ.
               ಪೋಲೀಸರು ಲಗೇಜ್‍ಗಳನ್ನು ಶೋಧಿಸಿದರೂ ಚಿನ್ನ ಪತ್ತೆಯಾಗಿರಲಿಲ್ಲ. ಪ್ರಾಥಮಿಕ ವಿಚಾರಣೆಯಲ್ಲಿ ಚಿನ್ನಾಭರಣ ಇರಲಿಲ್ಲ ಎಂದು ಶಂಶುದ್ದೀನ್ ಹೇಳಿದ್ದ. ಆದರೆ ಆಸ್ಪತ್ರೆಗೆ ಕೊಂಡೊಯ್ದ ಬಳಿಕ ನಡೆಸಿದ ಎಕ್ಸ್ ರೇ ಪರೀಕ್ಷೆಯಲ್ಲಿ ನಾಲ್ಕು ಕ್ಯಾಪ್ಸೂಲ್ ಗಳಲ್ಲಿ ದೇಹದೊಳಗೆ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ.
          ಘಟನೆಯಲ್ಲಿ ಶಂಶುದ್ದೀನ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ಇದರ ಹಿಂದಿರುವವರ ಪತ್ತೆಗೆ ತನಿಖಾ ತಂಡ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಕರಿಪ್ಪೂರ್ ವಿಮಾನ ನಿಲ್ದಾಣದಿಂದÉ್ಪೂೀಲೀಸರಿಗೆ ಸಿಕ್ಕಿಬಿದ್ದ 75ನೇ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries